ಬೆಳಗಾವಿ : ಎಂಎಲ್ಸಿ ಸಿಟಿ ರವಿ ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಸಿಪಿಐ ಮಂಜುನಾಥ್ ನಾಯಕ್ರನ್ನು ಈಗಾಗಲೇ ಅಮಾನತು ಮಾಡಲಾಗಿದೆ.
ಸದ್ಯ ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ ಅವರು, ಈಗಾಗಲೇ ನನ್ನನ್ನು ಅಮಾನುತು ಮಾಡಿ ಆದೇಶಿಸಲಾಗಿದೆ. ಡಿ.19ರಂದು ಖಾನಾಪುರ ಠಾಣೆಗೆ ಸಿ.ಟಿ.ರವಿರನ್ನ ಕರೆತರಲಾಗಿತ್ತು. ಅಂದು ಆ ಸಮಯದಲ್ಲಿ ಆದ ಘಟನಾವಳಿಗಳಿಗೆ ಸಂಬಂಧಿಸಿದಂತೆ ನನ್ನನ್ನು ಅಮಾನತು ಮಾಡಿದ್ದಾರೆ. ಇಲಾಖೆಯಲ್ಲೇ ನ್ಯಾಯ ಪಡೆಯುತ್ತೇನೆ. ಹಾಗಾಗಿ ಯಾವುದೇ ಬಂದ್, ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಡಿ. 19ರಂದು ಖಾನಾಪುರ ಠಾಣೆಗೆ ಸಿಟಿ ರವಿಯನ್ನ ಹಿರಿಯ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಡಿ.20 ರಿಂದ ಸಿಪಿಐ ಮಂಜುನಾಥ್ ನಾಯಕ್ ಯಾರ ಕೈಗೂ ಸಿಗದೇ, ಠಾಣೆಗೂ ಬಂದಿರಲಿಲ್ಲ. ಅಮಾನತು ಆದೇಶ ಹೊರ ಬೀಳುತ್ತಿದ್ದಂತೆ ಫೋನ್ ಸ್ವಿಚ್ಛ್ ಆಫ್ ಮಾಡಿದ್ದರು. ಹಿರಿಯ ಅಧಿಕಾರಿಗಳ ನಡೆಯಿಂದ ನೊಂದುಕೊಂಡರಾ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು.
PublicNext
25/12/2024 10:26 pm