ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟೇಷನಲ್ ಇಂಟೆಲಿಜೆನ್ಸ್ ಮತ್ತು ಸ್ಮಾರ್ಟ್ ಕಮ್ಯುನಿಕೇಷನ್ (ಸಿಐಎಸ್ಸಿ-2024) ಮತ್ತು ಮೆಟೀರಿಯಲ್, ಎನರ್ಜಿ, ಎನ್ವಿರಾನ್ಮೆಂಟ್ ಮತ್ತು ಮ್ಯಾನ್ಯುಫಾಕ್ಚರಿಂಗ್ (ಎಮ್ಇಇಎಮ್ಎಸ್ – 2024) ಎಂಬ ವಿಷಯದ ಕುರಿತು ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಯಿತು. ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಹಿರಿಯ ವಿಜ್ಞಾನಿ ಡಾ. ಕೃಷ್ಣ ಚಂದ್ರ ಗೌಡ ಇವರು ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿ ,ಜಾಗತಿಕ ಸವಾಲುಗಳಾದ ಸುಸ್ಥಿರತೆ, ಇಂಧನ ದಕ್ಷತೆ ಮತ್ತು ತಾಂತ್ರಿಕ ಆವಿಷ್ಕಾರಗಳನ್ನು ಎದುರಿಸುವಲ್ಲಿ ಸಮ್ಮೇಳನಗಳ ಮಹತ್ವವನ್ನು ಒತ್ತಿ ಹೇಳಿದರು. ಇಂತಹ ಸಮ್ಮೇಳನಗಳು ಪ್ರಭಾವಶಾಲಿಯಾದ ಸಂಶೋಧನೆಗಳನ್ನು ಪ್ರೇರೇಪಿಸಿ, ಅರ್ಥಪೂರ್ಣ ಪರಿಹಾರಗಳನ್ನು ನೀಡುವುದಾಗಿ ಹೇಳಿದರು.
ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ರತ್ನಕುಮಾರ್ ಸಮಾರಂಭದ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮ್ಮೇಳನದ ಕಿರು ಪುಸ್ತಕವನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು.ಸಂಸ್ಥೆಯ ಪ್ರಾಂಶುಪಾಲ ಪ್ರೊ. ಡಾ. ತಿರುಮಲೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
Kshetra Samachara
21/12/2024 01:36 pm