ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಸಿಂಧೂರ ರಾಜಾಳಿಗೆ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ

ಉಳ್ಳಾಲ: ವಿಜ್ಞಾನ ಆವಿಷ್ಕಾರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತೆ ಸಿಂಧೂರ ರಾಜ ಉಳ್ಳಾಲ್ ಅವರಿಗೆ ಮಕ್ಕಳಿಗೆ ನೀಡುವ ದೇಶದ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಗೆ ಬಾಜನಳಾಗಿದ್ದಾಳೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಪ್ರಶಸ್ತಿ ಪಡೆದ ಬಳಿಕ ಸಿಂಧೂರ ರಾಜ ಉಳ್ಳಾಲ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದಳು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ದೇಶದ 10 ಮಂದಿ ವಿದ್ಯಾರ್ಥಿಗಳು, 7 ಮಂದಿ ವಿದ್ಯಾರ್ಥಿನಿಯರು ಸೇರಿದಂತೆ 17ಮಂದಿಗೆ ಈ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಪ್ರಶಸ್ತಿ ವಿಜೇತರ ಪೈಕಿ ಕರ್ನಾಟಕದಿಂದ ಗೌರವ ಪಡೆದ ಏಕೈಕ ವಿದ್ಯಾರ್ಥಿನಿ ಸಿಂಧೂರ ರಾಜ ಆಗಿದ್ದರು.

ಸಿಂಧೂರ ರಾಜಳಿಗೆ, ಪಾರ್ಕಿನ್‌ಸನ್‌ ಪೀಡಿತರಿಗೆ ಸಹಾಯಕವಾಗುವ ಚಮಚ ಸಂಶೋಧನೆ ಮತ್ತು ಅಟಲ್‌ ಟಿಂಕರಿಂಗ್‌ ಲ್ಯಾಬ್‌ನಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ. ಈ ಕಾಯಿಲೆಗೆ ಸಂಬಂಧಿಸಿದಂತೆ ಫ್ರಿಸರಿಂಗ್‌ ಸಂದರ್ಭದಲ್ಲಿ ಅಲರ್ಟ್‌ ಮಾಡುವ ಶೂ, ಕೈಯಿಲ್ಲದ ವರಿಗೆ ಸಹಾಯವಾಗುವ ಪ್ರಾಸ್ಪೆ ಟಿಕ್‌ ಆರ್ಮ್ ಅನ್ನು ಸಿಂಧೂರ ಸಂಶೋಧಿಸಿದ್ದಾರೆ.

Edited By : Vijay Kumar
PublicNext

PublicNext

27/12/2024 02:37 pm

Cinque Terre

22.34 K

Cinque Terre

0

ಸಂಬಂಧಿತ ಸುದ್ದಿ