ಮಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜಿಲ್ಲೆಯ 3 ಕೇಂದ್ರಗಳಲ್ಲಿ ರವಿವಾರ ಸುಸೂತ್ರವಾಗಿ ನಡೆಯಿತು.
ಸುಮಾರು 1,445 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದರು. ಬೆಳಗ್ಗೆ ನಡೆದ ಮೊದಲ ಪತ್ರಿಕೆಯ ಪರೀಕ್ಷೆಗೆ 514 ಮಂದಿ ಹಾಜರಾಗಿ, 931 ಮಂದಿ ಗೈರು ಹಾಜರಾಗಿದ್ದರು. ಅಪರಾಹ್ನ ನಡೆದ 2ನೇ ಪತ್ರಿಕೆಯ ಪರೀಕ್ಷೆಗೆ 510 ಮಂದಿ ಹಾಜರಾಗಿದ್ದರೆ 935 ಗೈರು ಹಾಜರಾಗಿದ್ದರು.
ವಿಶ್ವವಿದ್ಯಾನಿಲಯ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್‌ಸ್ಟೀಟ್ ಹಾಗೂ ಬಲ್ಮಠ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಯಿತು , ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿತ್ತು.
PublicNext
30/12/2024 03:15 pm