ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಬೊಲೆರೊ ಕೆಳಗೆ ಸವಾರ ಸಿಲುಕಿದ್ರೂ ಗೊತ್ತೇ ಆಗ್ಲಿಲ್ವಾ?

ಜೈಪುರ: ಸಂಬಂಧಿಗಳ ಮನೆಯಿಂದ ತನ್ನ ಮನೆಗೆ ಹೊರಟಿದ್ದ ಬೈಕ್ ಸವಾರನೊಬ್ಬ ಬೊಲೆರೊ ವಾಹನದ ಕೆಳಗೆ ಸಿಲುಕಿದ್ದಾನೆ. ಅಷ್ಟಾದರೂ ಬೊಲೆರೊ ಚಾಲಕ ಕೆಳಗೆ ಸಿಲುಕಿದ್ದ ಬೈಕ್ ಹಾಗೂ ಸವಾರನನ್ನು ಎರಡು ಕಿಲೋ ಮೀಟರ್‌ವರೆಗೆ ಎಳೆದೊಯ್ದಿದ್ದಾನೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಿಜೆಪಿ ಸ್ಟಿಕ್ಕರ್ ಹೊಂದಿರುವ ಬೊಲೆರೊ ವಾಹನದ ಚಾಲಕ ಮಾಡಿದ ದೊಡ್ಡ ಅವಾಂತರಕ್ಕೆ ಬೈಕ್ ಸವಾರನ ಪ್ರಾಣ ಹೋಗಿದೆ. ರಾಜಸ್ಥಾನದ ಮೊರಾದಾಬಾದ್ ನಗರದ ಸದರ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮೊನ್ಸಾಲಿ ಹೆದ್ದಾರಿಯಲ್ಲಿ ನಡೆದಿದೆ. ಬೊಲೆರೊ ಕೆಳಗೆ ಬೈಕ್ ಸಿಲುಕಿದ ಪರಿಣಾಮ ಕಿಡಿ ಹೊತ್ತಿಕೊಂಡಿದೆ. ಈ ಬಗ್ಗೆ ದಾರಿಹೋಕರು ಚಾಲಕನ ಗಮನಕ್ಕೆ ತಂದಿದ್ದಾರೆ. ಅದಾಗ್ಯೂ ಚಾಲಕ ವಾಹನವನ್ನು ಎರಡು ಕಿ.ಮೀ ಚಲಾಯಿಸಿದ್ದಾನೆ. ಪರಿಣಾಮ ಕೆಳಗೆ ಸಿಲುಕಿದ್ದ ಸವಾರ ಮೃತಪಟ್ಟಿದ್ದಾನೆ.

ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

30/12/2024 05:59 pm

Cinque Terre

366.78 K

Cinque Terre

8

ಸಂಬಂಧಿತ ಸುದ್ದಿ