ಸುರತ್ಕಲ್: ಡಿಎಲ್ ಇಲ್ಲದೆ ವಾಹನ ಚಲಾಯಿಸಿ ಅಪಘಾತ ನಡೆಸಿದ ತಡಂಬೈಲ್ ವೆಂಕಟ್ರಮಣ ಕಾಲೊನಿ ನಿವಾಸಿ ಮೋಹನ್ ಆಚಾರ್ಯ ಅವರ ಪುತ್ರ ಧನುಷ್ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಟಿಐ ವಿದ್ಯಾರ್ಥಿಯಾದ ಆತ ಡಿಸೆಂಬರ್ 11 ರಂದು ದ್ವಿಚಕ್ರ ವಾಹನ ಚಲಾಯಿಸಿ ಅಪ ಘಾತ ನಡೆಸಿದ್ದು ಈತನಲ್ಲಿ ಡಿಎಲ್ ಇರಲಿಲ್ಲ.
ಆ್ಯಕ್ಟಿವಾ ಸವಾರನೊಂದಿಗೆ ಮಾತುಕತೆ ನಡೆಸಿದ ಪ್ರಕಾರ ಹಣ ನೀಡಲು ವ್ಯವಸ್ಥೆಯಾಗದ ಕಾರಣ ಹಾಗೂ ಇದರಿಂದ ಕೇಸ್ ಆದರೆ ತೊಂದರೆಯಾಗುತ್ತದೆ ಎಂದು ಹೆದರಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುರತ್ಕಲ್ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
Kshetra Samachara
21/12/2024 06:55 am