ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮವಾಗಿ ಮರಳು ಸಾಗಾಟ ಪ್ರಕರಣ - ಮುಲ್ಕಿ ಠಾಣೆಗೆ ವರ್ಗಾವಣೆ

ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ನಂದಿನಿ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಬ್ರಹ್ಮಾವರಕ್ಕೆ ಟಿಪ್ಪರ್ ಮೂಲಕ ಸಾಗಿಸುತ್ತಿದ್ದುದನ್ನು ಪಡುಬಿದ್ರಿ ಪೊಲೀಸರು ಪತ್ತೆ ಹಚ್ಚಿ ಸ್ವಾಧೀನಪಡಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಡುಬಿದ್ರಿ ಪೊಲೀಸರಿಗೆ ಮಾಹಿತಿದಾರರೊಬ್ಬರು ನೀಡಿದ ಮಾಹಿತಿಯಂತೆ ನ.13ರ ರಾತ್ರಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಹಳದಿ ಬಣ್ಣದ ಟಿಪ್ಪರೊಂದನ್ನು ತಡೆದಿದ್ದರು. ಈ ಸಂದರ್ಭ ಟಿಪ್ಪರ್ ಪರಿಶೀಲಿಸಿದಾಗ ಅದರಲ್ಲಿ ಮರಳು ತುಂಬಿದ್ದನ್ನು ಗಮನಿಸಿ ವಶಕ್ಕೆ ಪಡೆದಿದ್ದರು.

ತೀವ್ರ ವಿಚಾರಣೆ ಬಳಿಕ ಟಿಪ್ಪರ್ ಚಾಲಕ ರಾಘವೇಂದ್ರ ಪೂಜಾರಿ ಉತ್ತರ ಭಾರತದ ಕಾರ್ಮಿಕರ ಸಹಾಯದಿಂದ ಪಡುಪಣಂಬೂರು ಹೊಯ್ಗೆ ಗುಡ್ಡೆ ಬಳಿ ನಂದಿನಿ ಹೊಳೆ ಯಿಂದ ಆಕ್ರಮವಾಗಿ ಮರಳು ಸಂಗ್ರಹಿಸಿ ಬ್ರಹ್ಮಾವರಕ್ಕೆ ಸಾಗಾಟ ಮಾಡುವುದಾಗಿ ತಿಳಿಸಿದ್ದ. ಈ ವೇಳೆ ಟಿಪ್ಪರ್‌ನಲ್ಲಿ 2.5 ಯೂನಿಟ್ ಮರಳು ಇತ್ತು.

ಅಕ್ರಮ ಮರಳು ಸಾಗಾಟ ಬಗ್ಗೆ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಳಿನ ಮೌಲ್ಯ 10 ಸಾವಿರ ರೂ. ಮತ್ತು ಟಿಪ್ಪರ್ ಮೌಲ್ಯ 5 ಲಕ್ಷ ರೂ. ಆಗಿದ್ದು ಮುಟ್ಟು ಗೋಲು ಹಾಕಿಕೊಂಡಿದ್ದರು. ಘಟನೆಯು ಮುಲ್ಕಿ ಠಾಣಾ ವ್ಯಾಪ್ತಿಯ ಮುಲ್ಕಿ ತಾಲೂಕು ಪಡುಪಣಂಬೂರು ಗ್ರಾಮದ ಹೊಯ್ಗೆ ಗುಡ್ಡೆ ಎಂಬಲ್ಲಿ ನಂದಿನಿ ಹೊಳೆಯಲ್ಲಿ ನಡೆದಿರುವುದು ದೃಢಪಟ್ಟ ಕಾರಣ ಪ್ರಕರಣದ ಕಡತವನ್ನು ಮೇಲಾಧಿಕಾರಿಗಳ ಆದೇಶದಂತೆ ಮುಲ್ಕಿ ಪೋಲಿಸ್ ಠಾಣೆಗೆ ವರ್ಗಾಯಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

22/12/2024 04:48 pm

Cinque Terre

684

Cinque Terre

0

ಸಂಬಂಧಿತ ಸುದ್ದಿ