ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು

ಉಡುಪಿ: 2009 ರಲ್ಲಿ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಅಕ್ರಮವಾಗಿ ಗೋವಾ ಮದ್ಯವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ತ್ರಿಶ್ಶೂರು ಜಿಲ್ಲೆಯ ಚಾಲಕುಡಿಯ ನಿವಾಸಿ ದಯಾನಂದ ಬಂಧಿತ ಆರೋಪಿ.

ಈತನನ್ನು ಅಂದಿನ ಉಡುಪಿ ಜಿಲ್ಲಾ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಇನ್ಸ್ ಪೆಕ್ಟರ್ ತಿಮ್ಮಯ್ಯ ಮತ್ತು ಸಿಬ್ಬಂದಿ ಬಂಧಿಸಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದರು.ಬಳಿಕ ಆರೋಪಿಯು ನ್ಯಾಯಾಲಯದಿಂದ ಜಾಮೀನು ಪಡೆದು ಮುಂದೆ ನ್ಯಾಯಾಲಯದ ವಿಚಾರಣಾ ಸಮಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಆರೋಪಿ ವಿರುದ್ಧ ವಾರಂಟನ್ನು ಹೊರಡಿಸಿತ್ತು.

ಇದೀಗ ಉಡುಪಿ ಸೆನ್ ಪೊಲೀಸ್ ಠಾಣೆ ನಿರೀಕ್ಷಕ ರಾಮಚಂದ್ರ ನಾಯಕ್ ಮತ್ತು ಪಿ.ಎಸ್.ಐ ಪವನ್ ಕುಮಾರ್, ಪಡುಬಿದ್ರಿ ಪೊಲೀಸ್ ಠಾಣೆ ಎಸ್ಸೈ ರಾಜೇಶ್, ಸೆನ್ ಠಾಣಾ ಹೆಚ್ ಸಿ ಪ್ರವೀಣ ಕುಮಾರ್ ಮತ್ತು ಪಿಸಿ ದೀಕ್ಷಿತ್ ರನ್ನು ಒಳಗೊಂಡ ತಂಡ ಆರೋಪಿ ದಯಾನಂದನನ್ನು ಕೇರಳ ರಾಜ್ಯದ ತ್ರಿಶ್ಯೂರು ಜಿಲ್ಲೆಯ ಚಾಲಕುಡಿ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.ನ್ಯಾಯಾಲಯವು ಆರೋಪಿಗೆ ಡಿಸೆಂಬರ್ 30 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Edited By : PublicNext Desk
Kshetra Samachara

Kshetra Samachara

21/12/2024 08:57 pm

Cinque Terre

5.36 K

Cinque Terre

0