ಗದಗ: ಪಟ್ಟಣದಲ್ಲಿ ನಡೆಯುತ್ತಿರುವ ನಾಯಿ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಪುರಸಭೆಯಿಂದ ನಾಯಿ ಹಿಡಿಯಲು ರಾಜಕುಮಾರ ಡಾಗ್ ಕ್ಯಾಚಿಂಗ್ ಮಧುರೈ ಇವರಿಗೆ ಸೂಚಿಸಲಾಗಿತ್ತು ಎನ್ನಲಾಗಿದೆ.
ಸುಮಾರು 4 ದಿನಗಳಿಂದ ಒಟ್ಟು 9 ಜನರ ತಂಡ ಹಾಗೂ ಪುರಸಭೆಯ ಪೌರ ಕಾರ್ಮಿಕರು ಸೇರಿ ಪಟ್ಟಣದಲ್ಲಿ 338 ನಾಯಿಗಳನ್ನು ಹಿಡಿದಿದ್ದು, ಆದರೆ ಬಿಲ್ ನೀಡಲು ಪುರಸಭೆಯವರು ವಿಳಂಬ ಧೋರಣೆ ಮಾಡುತ್ತಿದ್ದಾರೆ ಎಂದು ದಿಢೀರ್ ಮುತ್ತಿಗೆ ಹಾಕಿ ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ನಡೆದಿದೆ.
ನಮಗೆ ನಾಯಿ ಹಿಡಿಯಲು ಫೋನ್ ಮೂಲಕ ಕರೆ ಮಾಡಿ ಬರಲು ಹೇಳಿದರು. ಆ ಕಾರಣದಿಂದ ತಮಿಳುನಾಡಿನಿಂದ ಸುಮಾರು 9 ಜನರು ಬಂದಿದ್ದೇವೆ. ಅಲ್ಲದೇ ಪ್ರತಿ ನಾಯಿಗೆ 400 ರೂಪಾಯಿ ನೀಡುತ್ತೇವೆ ಎಂದು ಹೇಳಿದ್ದಾರೆ. ಒಟ್ಟು 338 ನಾಯಿಗಳನ್ನು ಹಿಡಿದಿದ್ದೇವೆ. ಆದರೆ ನಮಗೆ ಬಿಲ್ ಕೊಡಲು ವಿಳಂಬ ಮಾಡುತ್ತಿದ್ದಾರೆ. ಇಂದು ನಾಳೆ ಕೊಡುತ್ತೇವೆ ಎನ್ನುತ್ತಾ ಹೇಳಿ ಅಲೆದಾಡಿಸುತ್ತಿದ್ದಾರೆ. ಇದೇ ರೀತಿ ಬಿಲ್ ನೀಡಲು ವಿಳಂಬ ಮಾಡಿದರೆ ಇಲ್ಲಿಯೇ ಸಾಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ಅದೂ ಅಲ್ಲದೇ ನಾಯಿ ಹಿಡಿಯುವ ಕುರಿತು ಪುರಸಭೆ ಅಧ್ಯಕ್ಷರಿಗೆ ಹಾಗೂ ಸದಸ್ಯರ ಗಮನಕ್ಕೆ ತರದೇ ಇದ್ದು ಅಲ್ಲದೆ ಪಶು ವೈದ್ಯಾಧಿಕಾರಿಗಳಿಗೆ ಸಹ ತಿಳಿಸಿಲ್ಲ. ಒಂದು ವೇಳೆ ನಾಯಿಯನ್ನು ಹಿಡಿಯುವಾಗ ಏನಾದರೂ ಹೆಚ್ಚು ಕಡಿಮೆ ಆದರೆ ಅವುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯರ ಗಮನಕ್ಕೆ ತಿಳಿಸಬೇಕಾಗಿತ್ತು ಎಂದು ಪ್ರಾಣಿ ದಯಾ ಸಂಘದ ಸದಸ್ಯರು ಆರೋಪಿಸಿದ್ದಾರೆ.
ಸುರೇಶ ಎಸ್.ಲಮಾಣಿ, ಪಬ್ಲಿಕ್ ನೆಕ್ಸ್ಟ್, ಗದಗ
PublicNext
20/12/2024 02:39 pm