ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ವಿದೇಶಿ ಬಾನಾಡಿಗಳ ಸ್ವಚ್ಛಂದ ವಿಹಾರ - ಪ್ರಸಿದ್ಧಿ ಪಡೆಯುತ್ತಿರುವ ಮಾಗಡಿ ಪಕ್ಷಿಧಾಮ

ಶಿರಹಟ್ಟಿ: ಇತ್ತೀಚೆಗೆ ರಾಜ್ಯದಲ್ಲಿಯೇ ಗದಗ ಜಿಲ್ಲೆಯ ಹೆಸರನ್ನು ಎತ್ತಿ ತೋರಿಸುತ್ತಿರುವ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆ ಇದೀಗ ಎಲ್ಲಿಲ್ಲದ ಹೆಸರು ಮಾಡುತ್ತಿದೆ. ಏಕೆಂದರೆ ಪ್ರತಿ ವರ್ಷ ಇಲ್ಲಿಗೆ ತಮ್ಮ ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಅಪರೂಪದ ಅತಿಥಿಗಳಾಗಿ ನಾನಾ ರೀತಿಯ ಲಕ್ಷಾಂತರ ವಿದೇಶೀ ಪಕ್ಷಿಗಳು ಆಗಮಿಸುತ್ತವೆ.

ಪ್ರತಿ ವರ್ಷ ಚಳಿಗಾಲದ ಸಮಯಕ್ಕೆ ಮಾಗಡಿ ಕೆರೆಗೆ ಈ ವಿದೇಶೀ ಪಕ್ಷಿಗಳು ಆಗಮಿಸುತ್ತವೆ. ಈ ಚಳಿಗಾಲದ ಅತಿಥಿಗಳೆಲ್ಲ ಹಂಸಗಳ ಜಾತಿಗೆ ಸೇರಿದ್ದು, ಇವುಗಳಲ್ಲಿ ಲಾಂಗ್‌ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್, ಪೇಂಟೆಡ್ ಸ್ಪಾರ್ಕ್, ಬಾರ್ ಹೆಡೆಡ್ ಗೂಸ್, ಬ್ಲ್ಯಾಕ್ ಬಿಸ್, ವೈಟ್ ಬಿಸ್, ಬ್ಲ್ಯಾಕ್ ನೆಕಡ್ ಸ್ಪಾರ್ಕ್, ವೈಟ್ ನೆಕಡ್ ಸ್ಪಾರ್ಕ್‌, ಸ್ಕ್ಯಾಪ್ ಡಕ್, ಗ್ರೇ ಡಕ್, ಕೂಟ್, ಲಿಟಿಲ್ ಕಾರ್ಪೋರೆಂಟ್, ಸ್ಪಾಟ್ ಬಿಲ್ ಸೇರಿ ಸುಮಾರು 16ಕ್ಕಿಂತಲೂ ಹೆಚ್ಚಿನ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.

ಈ ವಿದೇಶಿ ಪಕ್ಷಿಗಳಲ್ಲಿ ವಿವಿಧ ಜಾತಿಯ ಪಕ್ಷಿಗಳು ಆಗಮಿಸಿವೆ. ಇವುಗಳಲ್ಲಿ ಬಾರ್ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್ ಹೆಚ್ಚಿನ ಸಂಖ್ಯೆಗಳಲ್ಲಿ ಆಗಮಿಸಿವೆ. ಪ್ರತಿ ವರ್ಷ ಜಮ್ಮು ಕಾಶ್ಮೀರದ ಲಡಾಕ, ಲೇಹ್, ವಿದೇಶಗಳಾದ ಮಲೇಷಿಯಾ, ರಷ್ಯಾ, ಆಸ್ಟ್ರೇಲಿಯಾ, ಟಿಬೇಟ್, ಸೈಬಿರಿಯಾಗಳಿಂದ ವಲಸೆ ಬರುತ್ತವೆ. ಲಡಾಕ, ಲೇಹ್, ಟಿಬೇಟ್‌ಗಳಲ್ಲಿ ವಿಪರೀತ ಚಳಿಗಾಲವಿರುವದರಿಂದ ನವೆಂಬರದಿಂದಾ ಮಾರ್ಚವರೆಗೆ ಅಲ್ಲಿನ ಸರೋವರಗಳು ಹೆಪ್ಪುಗಟ್ಟುವುದರಿಂದ ಅಲ್ಲಿನ ಪಕ್ಷಿಗಳು ತಮಗೆ ವಾಸಕ್ಕೆ ಹವಾಮಾನ ಸರಿ ಹೊಂದದೇ ಇರುವುದರಿಂದ ನವೆಂಬರ್‌ನಿಂದ ಫೆಬ್ರುವರಿವರೆಗೆ ಈ ಮಾಗಡಿ ಕೆರೆಗೆ ಬಂದು ತಮ್ಮ ವಂಶೋದ್ಧಾರ ಮಾಡಿಕೊಂಡು ಮರಳುತ್ತವೆ.

ಈ ಅಪರೂಪದ ವಿದೇಶಿ ಅತಿಥಿಗಳು ಈ ಕೆರೆಗೆ ನವೆಂಬರ್ ತಿಂಗಳಿನಲ್ಲಿ ಬಂದಿಳಿದು ಫೆಬ್ರುವರಿ ತಿಂಗಳಲ್ಲಿ ತಮ್ಮ ದೇಶಗಳಿಗೆ ಮರಳುತ್ತವೆ. ಒಟ್ಟು ನಾಲ್ಕು ತಿಂಗಳುಗಳ ಕಾಲ ಈ ಕೆರೆಯಲ್ಲಿ ಬೀಡು ಬಿಡುವ ಈ ಪಕ್ಷಿಗಳು ಮುಂಜಾವಿನಲ್ಲಿ ನೆರೆಯ ಹಾವೇರಿ, ಧಾರವಾಡ, ಬಳ್ಳಾರಿ ಹಾಗೂ ಗದಗ ಜಿಲ್ಲೆಗಳ ಅನೇಕ ದೂರದ ಹೊಲಗಳಿಗೆ ಆಹಾರ ಅರಸಿ ಹೋಗುತ್ತವೆ. ಇವುಗಳು ಮುಖ್ಯ ಆಹಾರ, ಭತ್ತ, ಕಡಲೆ ಮತ್ತು ಶೇಂಗಾ ಆಗಿವೆ.

Edited By : Suman K
PublicNext

PublicNext

16/12/2024 12:19 pm

Cinque Terre

21.26 K

Cinque Terre

1

ಸಂಬಂಧಿತ ಸುದ್ದಿ