ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ 9ನೇ ವಾರ್ಷಿಕೋತ್ಸವ ಅರ್ಹ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ತಲುಪಲಿ

ಗದಗ.

ಕಾರ್ಮಿಕರ ಅಭಿವೃದ್ದಿಗೆ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ, ಅವುಗಳನ್ನ ಕಾರ್ಮಿಕರು ಸದುಪಯೋಗ ಮಾಡಿಕೊಳ್ಳಬೇಕು. ಎಂದು ಗದಗ ಜಿಲ್ಲಾ ಯುತ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.

ಮುಳಗುಂದ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಶಾದಿ ಹಾಲನಲ್ಲಿ ಸೋಮವಾರ ನಡೆದ ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ 9ನೇ ವಾರ್ಷಿಕೋತ್ಸವ ಹಾಗೂ ಹಿರಿಯ ಕಾರ್ಮಿಕರಿಗೆ ಸನ್ಮಾನ ಸಮಾರಂಭವನ್ನ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕ ಸಂಘಗಳು ಅರ್ಹ ಕಾರ್ಮಿಕರಿಗೆ ಸರ್ಕಾರದ ಎಲ್ಲ ಯೋಜನೆಗಳು ತಲುಪಿಸುವ ಕೆಲಸ ಮಾಡಬೇಕು, ಯೋಜನೆಗಳನ್ನ ತಲುಪಿಸುವಲ್ಲಿ ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘವು ಮುಂಚೂಣೆಯಲ್ಲಿರುವದು ಶ್ಲಾಘನೀಯ. ಎಂದು ಹೇಳಿದರು.

ನಂತರ ವೈದ್ಯ ಡಾ.ಎಸ್.ಸಿ.ಚವಡಿ ಮಾತನಾಡಿ, ಯಾವ ಕಾಯಕವು ಕೀಳಲ್ಲ, ಯಾವುದೆ ಕಾಯಕ ಮಾಡಿದರೂ ಪ್ರಾಮಾಣಿಕ, ಶೃದ್ದೆಯಿಂದ ಮಾಡಿ, ಕೂಲಿ ಕಾರ್ಮಿಕರು ದುಷ್ಚಟದಿಂದ ಅನಾರೋಗ್ಯ ತಂದುಕೊಳ್ಳುತ್ತಾರೆ, ಆದಷ್ಟು ಚಟಗಳಿಂದ ದೂರವಿರಲು ಪ್ರಯತ್ನಿಸಿ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ. ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಂ.ಎ.ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಳಗುಂದ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಣ್ಣ ನೀಲಗುಂದ, ಬಿಎಂಎಸ್. ಸಮಿತಿ ಅಧ್ಯಕ್ಷ ಎಂ.ಡಿ.ಬಟ್ಟೂರ,ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ,ಕಾರ್ಮಿಕ ಕಲ್ಯಾಣ ಸಂಘದ ಗದಗ ಜಿಲ್ಲಾಧ್ಯಕ್ಷ ಇರ್ಪಾನ ಡಂಬಳ, ಎಂ.ಐ.ನವಲೂರ, ಈಶ್ವರ ಲಕ್ಷ್ಮೇಶ್ವರ, ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ ಶೇಖ, ಸದಸ್ಯರಾದ ಎಸ್.ಸಿ.ಬಡ್ನಿ,ಎನ್.ಆರ್.ದೇಶಪಾಂಡೆ, ಕೆ.ಎಲ್.ಕರೇಗೌಡ್ರ, ವಿಜಯ ನೀಲಗುಂದ, ಅಂಜುಮನ್ ಕಮಿಟಿ ಅಧ್ಯಕ್ಷ ತಾಜ್ಜುದ್ದಿನ ಕಿಂಡ್ರಿ, ಗದಗ ಕಾರ್ಮಿಕ ನಿರೀಕ್ಷಕಿ ಸುಷ್ಮಾ , ಸೈಯದಲಿ ಸೇಖ, ಎಂ.ಎಂ.ಜಮಾಲಸಾಬನವರ, ಮಾಬೂಸಾಬ ಮುಳಗುಂದ, ಎ.ಡಿ.ಮುಜಾವರ, ದಾವುದ ಜಮಾಲಸಾಬನವರ ಮೊದಲಾವರು ಇದ್ದರು.

Edited By : PublicNext Desk
Kshetra Samachara

Kshetra Samachara

17/12/2024 04:22 pm

Cinque Terre

12.34 K

Cinque Terre

0

ಸಂಬಂಧಿತ ಸುದ್ದಿ