ಚಿಕ್ಕೋಡಿ: ಭಾರತ ಸರಕಾರದ ಆಯುಷ ಸಚಿವಾಲಯವು “ದೇಶ್ ಕಾ ಪ್ರಕೃತಿ ಪರೀಕ್ಷಣ” ರಾಷ್ಟ್ರೀಯ ಅಭಿಯಾನವನ್ನು ಪ್ರತಿ ಮನೆಗೆ ಆಯುರ್ವೇದವನ್ನು ಪರಿಚಯಿಸಿಲು ಹಮ್ಮಿಕೊಂಡಿದ್ದು ಅದರ ಲಾಭವನ್ನು ಚಿಕ್ಕೋಡಿಯ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಎಂದು ಚಿಕ್ಕೋಡಿಯ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ವೀಣಾ ಜಗದೀಶ ಕವಟಗಿಮ ಹೇಳಿದರು.
ಅವರು ಇಂದು ಚಿಕ್ಕೋಡಿಯಲ್ಲಿ ಜರುಗಿದ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನಕ್ಕೆ ತಮ್ಮ ಪ್ರಕೃತಿ ಪರೀಕ್ಷೆ ಮಾಡಿಕೊಳ್ಳುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಪ್ರಕೃತಿಯ ಅನುಸಾರವಾಗಿ ಅವರು ತಮ್ಮ ಜೀವನಶೈಲಿ, ಆಹಾರ ಪದ್ಧತಿ, ಮತ್ತು ವ್ಯಾಯಾಮದ ದಿನಚರಿಗಳನ್ನು ಅಳವಡಿಸಿಕೊಂಡು ಮತ್ತು ಸುಧಾರಿತ ಯೋಗಕ್ಷೇಮಕ್ಕಾಗಿ ಆಯುರ್ವೇದವನ್ನು ಜೀವನಶೈಲಿಯಾಗಿ ಸ್ವೀಕರಿಸಲು ಸಹಕಾರಿಯಾಗಲಿದೆ. ಅದೇ ರೀತಿ ನಮ್ಮ ಚಿಕ್ಕೋಡಿಯ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ನಾಗರಿಕರು ಸಹ ಇದರಲ್ಲಿ ಭಾಗವಹಿಸಿ ಅಭಿಯಾನವನ್ನು ಯಶ್ವಸಿಗೊಳಿಸಬೇಕೇಂದು ಹೇಳಿದರು.
ಕೆ ಎಲ್ ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿ ಮಾತನಾಡುತ್ತಾ ಈ ಪರೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನಲ್ಲಿ ಮಾಡಲಾಗುವುದು, ಇದರಲ್ಲಿ ನಾಗರಿಕರ ಮೊಬೈಲ್ ಫೋನ್‌ಗಳಲ್ಲಿ ಪ್ರಕೃತಿ ಪರೀಕ್ಷೆಯ ಅಭಿಯಾನದ ನಂತರ, ಅವರ ಪ್ರಕೃತಿಯ ಅನುಸಾರವಾಗಿ ಆಹಾರ ಮತ್ತು ವ್ಯಾಯಾಮದ ದಿನಚರಿ ಬಗ್ಗೆ ಮಾಹಿತಿ ಸ್ವೀಕರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕೋಡಿಯ ಕದಳಿ ಮಹಿಳಾ ವೇದಿಕೆಯ ಸದಸ್ಯರ ಪ್ರಕೃತಿ ಪರೀಕ್ಷೆ ಮಾಡಿ ಅದರ ಅನುಗುಣವಾಗಿ ಆಹಾರ ಮತ್ತು ವಿಹಾರದ ಬಗ್ಗೆ ತಿಳುವಳಿಕೆ ಹೇಳಲಾಯಿತು. ಇದೇ ಸಂದರ್ಭದಲ್ಲಿ ಮಹಾಂತೇಶ ಗುಡ್ನವರ, ಡಾ. ಬಾಹುಬಲಿ ಮಹಾಜನ, ಹಾಗೂ ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಮಹಿಳಾ ಸದ್ಯಸರ ಪ್ರಕೃತಿಯನ್ನು ಪರಿಶೀಲಿಸಿದ್ದರು.
Kshetra Samachara
20/12/2024 12:37 pm