ಮುಲ್ಕಿ:ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಸಾಧನೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆ ನೀಡಿಬೇಕು. ಶಿಕ್ಷಣ ಮನುಷ್ಯನನ್ನು ಬಾಳಿ ಬೆಳಸುತ್ತದೆ ಎಂದು ಮಣಿಪಾಲ್ ಡಾಟ್ ಪ್ರೈ. ಲಿ. ಇದರ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕ ನಾಗರಾಜ ಶೆಟ್ಟಿಗಾರ್ ಕಟೀಲ್ ಹೇಳಿದರು.
ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನ ಶ್ರೀ ಶಾರದಾ ಉತ್ಸವ ಉದ್ಘಾಟಿಸಿ ಮಾತನಾಡಿದರು
ಸೊಸೈಟಿಯ ಅಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ,
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು
ಮುಲ್ಕಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ.ಪೌಲ್ ರೋಲ್ಫಿ ಡಿಕೋಸ್ತಾ,, ಉದ್ಯಮಿ ಅಜಿತ್ ಕೆರೆಕಾಡು, ಸೊಸೈಟಿಯ ಕಾರ್ಯದರ್ಶಿ ಪುರಂದರ ಶೆಟ್ಟಿಗಾರ್, ಕೋಶಾಧಿಕಾರಿ ಕೆ. ಭುವನಾಭಿರಾಮ ಉಡುಪ, ನಿರ್ದೇಶಕರುಗಳಾದ ಸುರೇಶ್ ರಾವ್ ನಿರಳಿಕೆ, ಪಟೇಲ್ ವಾಸುದೇವ ರಾವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ಯಾಮ್ ಸುಂದರ್ ಶೆಟ್ಟಿ,ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು, ಪ್ರಾಂಶುಪಾಲ ಜಿತೇಂದ್ರ ವಿ ರಾವ್, ಸಹ ಶಿಕ್ಷಕಿಯರಾದ ವೀಣಾ , ಶ್ರೀಲತಾ ವನಿತಾ ಮತ್ತಿತರರು ಉಪಸ್ಥಿತರಿದ್ದರು
Kshetra Samachara
19/12/2024 07:55 am