ಬೆಳಗಾವಿ : ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಸೇವಾನಿರತ ಸೈನಿಕ ಮಹೇಶ ಎನ್ ವಾಲಿ (24) ದೇಶ ಸೇವೆಯನ್ನು ಸಲ್ಲಿಸುತ್ತಿರುವಾಗ ನಡೆದಿರುವ ಒಂದು ಘಟನೆಯಲ್ಲಿ ವೀರಮರಣ ಹೊಂದಿದ್ದು ಮಂಗಳವಾರ ಬೆಳಗ್ಗೆ ಯೋಧನ ಪಾರ್ಥಿವ ಶರೀರ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸೇರಿದ ಎಲ್ಲಾ ಮಾಜಿ ಸೈನಿಕರು ಹಾಗೂ ಸ್ಥಳೀಯ ಸೇನಾಧಿಕಾರಿಗಳು ಜಿಲ್ಲಾಧಿಕಾರಿಗಳು ಮೃತ ಯೋಧನಿಗೆ ಗೌರವ ನಮನ ಸಲ್ಲಿಸಿದರು.
ಆದರೆ ಇಡೀ ರಾಜ್ಯದ ರಾಜಕೀಯ ನಾಯಕರುಗಳೆಲ್ಲ ಬೆಳಗಾವಿ ಅಧಿವೇಶನದಲ್ಲಿ ಬೀಡು ಬಿಟ್ಟಿದ್ದು ಯಾರೊಬ್ಬ ರಾಜಕೀಯ ನಾಯಕರು ಕೂಡ ಸೈನಿಕನ ಗೌರವ ನಮನ ಕಾರ್ಯಕ್ರಮಕ್ಕೆ ಬಾರದಿರುವುದು ತುಂಬಾ ಬೇಸರವನ್ನುಂಟು ಮಾಡಿದೆ. ರಾಜಕೀಯ ನಾಯಕರುಗಳಿಗೆ ರೈತರು ಮತ್ತು ಸೈನಿಕರ ಮೇಲೆ ಪ್ರೀತಿ ಅನುಕಂಪ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ.
ಜಮ್ಮುಕಾಶ್ಮೀರ ಲೇಹ ಎನ್ನುವ ಗಡಿ ಭಾಗದಲ್ಲಿ ಮೈನಸ್ 20 ಡಿಗ್ರಿ ಸೆಲ್ಸಿಯಸ್ ಚಳಿ ಹಿನ್ನಲೆ ರಸ್ತೆ ಮೇಲೆ ಮಂಜಿನ ಉಂಡೆ ಬಿದ್ದಿದ್ದು ರಸ್ತೆ ಮೇಲಿನ ಮಂಜಿನ ಉಂಡೆಯನ್ನು ಇಟ್ಯಾಚ್ ವಾಹನದ ಮೂಲಕ ತೆಗೆಯುವ ಸಮಯದಲ್ಲಿ ಗುಡ್ಡದಿಂದ ಮೂರು ಟನ್ ಭಾರವುಳ್ಳ ಕಲ್ಲೊಂದು ಹಿಟ್ಯಾಚ ಮೇಲೆ ಬಿದ್ದ ಪರಿಣಾಮ ಯೋಧ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಇಂಡಿಯನ್ ಆರ್ಮಿ ಬಾರ್ಡರ್ ರೋಡ್ ಆರ್ಗನೈಜೇಷನ್ ಯುನಿಟ್ ನಲ್ಲಿ ಯೋಧ ಮಹೇಶ ಎನ್ ವಾಲಿ ಕೆಲಸ ಮಾಡುತ್ತಿದ್ದ ಲಡಾಕ ಕೇಂದ್ರಾಡಳಿತ ಪ್ರದೇಶದಲ್ಲಿ ನಿಮೋ ಪದಂ ಡಾರ್ಚಾ ರೋಡ ಮಾಡುವಾಗ ಗಿಡ್ಡದ ಮೇಲಿಂದ ಕಲ್ಲು ಬಿದ್ದು ಯೋಧ ಸಾವಿಗಿಡಾಗಿದ್ದಾನೆ ದೇಹವೆಲ್ಲ ಛಿದ್ರವಾಗಿದ್ದು ಯೋಧ ಮಹೇಶನ ಕಾಲುಗಳು ಮಾತ್ರ ಪತ್ತೆಯಾಗಿವೆ.
ಇದೇ 2025 ಫೆಬ್ರವರಿಯಲ್ಲಿ ಮಹೇಶನ ಮದುವೆ ಕೂಡಾ ನಿಶ್ಚಿಯವಾಗಿತ್ತು ಆದರೆ, ಆತನ ದುರದೈವ ವಿಧಿ ಲಿಖಿತ ಬೇರೆನೆ ಆಗಿದ್ದು ಇದೇ ಡಿಸೆಂಬರ 14 ಸಾವನ್ನಪ್ಪಿದ್ದು ಮಂಗಳವಾರ ಪಾರ್ಥಿವ ಶರೀರ ಬೆಳಗಾವಿಯ ಸ್ವ ಗ್ರಾಮಕ್ಕೆ ಆಗಮಿಸಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
PublicNext
18/12/2024 04:18 pm