ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕಲಿಸಿದ ಗುರುಗಳಿಗೆ ನಮಿಸಿದ ಹಳೆಯ ವಿದ್ಯಾರ್ಥಿಗಳು

ಧಾರವಾಡ : ಶಿಕ್ಷಕರೆಂದರೆ ಅದೇನೋ ಗೌರವ. ಆ ಶಿಕ್ಷಕರನ್ನು ನೆನೆದು ಸನ್ಮಾನಿಸಿ, ಅವರಿಗೊಂದು ಗೌರವ ಸಮರ್ಪಿಸಿದಾಗ ಸಿಗುವ ಸಂತೋಷದ ಮುಂದೆ ಮತ್ತೊಂದು ಸಂತೋಷವಿಲ್ಲ. ಇಂತಹ ಸಂತೋಷದ ಕ್ಷಣಕ್ಕೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ 1998-99ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ.

ಹೌದು! ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ 1998-99ರ ಸಾಲಿನ ಎಲ್ಲ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ತಮಗೆ ವಿದ್ಯಾದಾನ ಮಾಡಿದ ಎಲ್ಲ ಶಿಕ್ಷಕರನ್ನು ವಿಶೇಷವಾಗಿ ಗೌರವಿಸಿ ಅವರಿಗೆ ಗುರು ವಂದನೆ ಸಲ್ಲಿಸಿದ್ದಾರೆ.

ಗ್ರಾಮದ ವಿರುಪಾಕ್ಷೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು, ತಮಗೆ ಕಲಿಸಿದ ಗುರುಗಳನ್ನು ವಿಶೇಷವಾಗಿ ಗೌರವಿಸಿದರು. ಎಲ್ಲ ಶಿಕ್ಷಕರನ್ನು ಹೂವಿನ ಹಾಸಿಗೆ ಮೇಲೆ ಬರಮಾಡಿಕೊಂಡು ತಮ್ಮ ವಿದ್ಯಾರ್ಥಿ ಜೀವನದ ಹಳೆಯ ಘಟನೆಗಳನ್ನು ಮೆಲಕು ಹಾಕಿದರು.

ಮೂರು ಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ, ಜೋತಿಷಿ ಮಹಾದೇವಪ್ಪ ಅಷ್ಟಗಿ, ಕಲ್ಲೂರಿನ ಲಲಿತಮ್ಮನವರು ಸೇರಿದಂತೆ ಅನೇಕರು ಗುರುವಂದನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಹಳೆಯ ವಿದ್ಯಾರ್ಥಿಗಳು ಮಾಡಿದ ಈ ಕಾರ್ಯವನ್ನು ಶ್ಲಾಘಿಸಿದರು.

Edited By : Suman K
Kshetra Samachara

Kshetra Samachara

16/12/2024 01:49 pm

Cinque Terre

24.3 K

Cinque Terre

1

ಸಂಬಂಧಿತ ಸುದ್ದಿ