ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಕುರಿಗಾಯಿ‌ ಕೊಲೆ ಮಾಡಿ ಪರಾರಿಯಾಗಿದ್ದ, ಆರೋಪಿ ಬಂಧನ‌

ಕೋಲಾರ : ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿ ಚನ್ನಸಂದ್ರ ಗ್ರಾಮದ ಸಮೀಪ ಕುರಿಗಾಹಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ವೇಮಗಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಬೆಳ್ಳಹಳ್ಳಿ ಗ್ರಾಮದ ಮಾಧವ (21) ಬಂಧಿತ ಆರೋಪಿ. ನ.29ರಂದು ಗ್ರಾಮದ ತಳಾರಿ ನಾಗರಾಜ್‌ (48) ಎಂಬುವವರ ಕೊಲೆ ನಡೆದಿತ್ತು. ಗ್ರಾಮದ ಬಳಿ ತಳಾರಿ ನಾಗರಾಜ ಕುರಿ ಮೇಯಿಸುತ್ತಿದ್ದಾಗ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದರು. ವಿವಿಧ ಮಾಹಿತಿ ಆಧಾರದ ಮೇಲೆ ಮಾಧವ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಮೃತ ನಾಗರಾಜ ಬಡ್ಡಿಗೆ ಹಣ ನೀಡುತ್ತಿದ್ದರು, ಆರೋಪಿಯು ತನಗೂ ಹಣ ನೀಡುವಂತೆ ಕೇಳಿದ್ದಾನೆ. ಆದರೆ, ಹಣ ನೀಡದೇ ಇದ್ದ ಕಾರಣ ನಾಗರಾಜನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/12/2024 03:02 pm

Cinque Terre

400

Cinque Terre

0