ಕೋಲಾರ : 2013 ರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಮುಳಬಾಗಿಲಿನಲ್ಲಿ ಶಾಸಕರಾಗಿದ್ದ ಕೊತ್ತೂರು ಮಂಜುನಾಥ್ ವಿರುದ್ದ ದಾಖಲಾಗಿದ್ದ ಎಫ್.ಐ.ಆರ್ ವಿರುದ್ದ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದು, ಆರೋಪಿಯಾದ ಶಾಸಕ ಕೊತ್ತೂರು ಮಂಜುನಾಥ್ ರವರನ್ನು ಕೂಡಲೆ ಬಂಧಿಸುವಂತೆ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸಲು ಆರ್.ಪಿ.ಐ ಪಕ್ಷ
ಸರ್ಕಾರವನ್ನು ಒತ್ತಾಯ ಮಾಡುತ್ತಿದೆ ಎಂದು ಆರ್.ಪಿ.ಐ.ಪಕ್ಷದ ರಾಜ್ಯ ಅಧ್ಯಕ್ಷ ಸತೀಶ್ ತಿಳಿಸಿದರು.
ನಗರದ ಪತ್ರಕರ್ತ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಹಾಗೂ ಕಾನೂನಿನ ಮೇಲೆ ಗೌರವ ಇದ್ದರೆ,ದಲಿತರ ಹಕ್ಕನ್ನು ಕದ್ದ ಕೊತ್ತೂರು ಮಂಜುನಾಥ್ ರವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.
PublicNext
14/12/2024 02:51 pm