ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಒಡಿಶಾ ಮೂಲದ ಕಾರ್ಮಿಕರ ರಕ್ಷಣೆ

ಕೋಲಾರ - ಕೋಲಾರ ತಾಲ್ಲೂಕಿನ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಹಲವಾರು ವರ್ಷಗಳಿಂದ ಸರಿಯಾದ ವೇತನವಿಲ್ಲದೆ ದುಡಿಯುತ್ತಿದ್ದ ಒಡಿಶಾ ಮೂಲದ 9 ಕಾರ್ಮಿಕರನ್ನು ರಕ್ಷಿಸಲಾಗಿದೆ. ಮೂರಂಡಹಳ್ಳಿ ಗ್ರಾಮದ ಬಳಿ ಇರುವ ಎಸ್‌ಬಿಡಬ್ಲ್ಯು ಇಟ್ಟಿಗೆ ಕಾರ್ಖಾನೆಯಲ್ಲಿ 18 ವರ್ಷದ ಒಳಗಿನ ಮೂವರು, ಇಬ್ಬರು ವೃದ್ಧರು ಸೇರಿದಂತೆ 9 ಕಾರ್ಮಿಕರು ದುಡಿಯುತ್ತಿದ್ದರು. ದುಡಿಸಿಕೊಂಡು ಅವರಿಗೆ ಸರಿಯಾದ ವೇತನ ನೀಡುತ್ತಿರಲಿಲ್ಲ ಎಂಬ ದೂರು ಆಧರಿಸಿ ಕ್ರಮ ವಹಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್‌ ನಯನಾ, ಕಾರ್ಮಿಕ ಇಲಾಖೆ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಒಂಬತ್ತೂ ಮಂದಿಯನ್ನು ಬಂಧನದಿಂದ ಬಿಡಿಸಿ ಅವರ ಸ್ವಗ್ರಾಮಕ್ಕೆ ತೆರಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

Edited By : PublicNext Desk
Kshetra Samachara

Kshetra Samachara

14/12/2024 12:33 pm

Cinque Terre

820

Cinque Terre

0

ಸಂಬಂಧಿತ ಸುದ್ದಿ