ಕೊಡಗು: ರಾಜ್ಯ ಕಂಡ ಮೇರು ವ್ಯಕ್ತಿತ್ವದ ರಾಜಕಾರಿಣಿ, ಹಿರಿಯ ಮುತ್ಸದಿ, ಅಭಿವೃದ್ದಿಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ನವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಲ್ಲಿ ಎಸ್.ಎಂ.ಕೃಷ್ಣ ರವರ ಪರಿಶ್ರಮ ಅಪಾರವಾಗಿದ್ದು ಅವರ ಮಹತ್ತರ ಕೊಡುಗೆಯನ್ನು ರಾಜ್ಯ ಮತ್ತು ದೇಶ ಮರೆಯುವಂತಿಲ್ಲ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿರುವ ಎ.ಎಸ್.ಪೊನ್ನಣ್ಣವರು ಎಸ್.ಎಂ.ಕೃಷ್ಣ ರವರ ಅಗಲಿಕೆ ರಾಜ್ಯ ಮತ್ತು ದೇಶಕ್ಕೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ..
Kshetra Samachara
10/12/2024 10:48 am