ಕೊಡಗು- ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಕಚೇರಿಯ ಉದ್ಘಾಟನೆ ನಡೆಸಿದರು.
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯಲ್ಲಿ ಕಚೇರಿ ತೆರೆದಿದ್ದು, ಇಂದು ಮುಂಜಾನೆಯಿಂದ ಕಚೇರಿಯಲ್ಲಿ ವಿವಿಧ ರೀತಿಯ ಪೂಜೆಗಳು ಜರುಗಿದವು. ಮೈಸೂರು- ಕೊಡಗು ಜಿಲ್ಲೆಗಳ ಜವಾಬ್ದಾರಿ ಸಂಸದರ ಮೇಲೆ ಇರುವುದರಿಂದ ವಾರದಲ್ಲಿ ಒಂದು ದಿನ ಸಂಸದರು ಜಿಲ್ಲೆಯಲ್ಲಿ ಸಿಗುವುದಾಗಿ, ವಾರದ ಮೂರು ದಿನ ತಮ್ಮ ಪಿಎ ಕಚೇರಿಯಲ್ಲಿ ಲಭ್ಯವಿದ್ದು, ಜನರು ತಮ್ಮ ಸಮಸ್ಯೆಗಳನ್ನ ತಮ್ಮ ಬಳಿ ತರಬಹುದೆಂದು ಹೇಳಿದರು ಹಾಗೂ ಏನೇ ಸಮಸ್ಯೆಗಳಿದ್ದರೂ ತಾವು ಬಗೆಹರಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಪ್ರಮುಖ ಮುಖಂಡರು ಹಾಜರಿದ್ದರು.
PublicNext
08/12/2024 08:48 pm