ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಬಾಣಂತಿಯರ ಸಾವಿನ ಪ್ರಕರಣ ಗಂಭೀರ ವಿಚಾರ- ಸಂಸದ ಯದುವೀರ್ ಬೇಸರ

ಕೊಡಗು: ಬಾಣಂತಿಯರ ಸರಣಿ ಸಾವಿನ ಪ್ರಕರಣ ಬಹಳ ಗಂಭೀರ ವಿಚಾರವಾಗಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಮುಂದೆ ನಡೆಯಬಾರದು ಎಂದು ಸಂಸದ ಯದುವೀರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಸಂಸದರ ನೂತನ ಕಚೇರಿಯನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಯದುವೀರ್‌, ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ನಡೆದಿದೆ. ಇದಕ್ಕಾಗಿ ಬಿಜೆಪಿ ನಾಯಕರು ಆರೋಗ್ಯ ಸಚಿವರ ರಾಜೀನಾಮೆ ಕೇಳಿದ್ದಾರೆ. ನಾನು ಅವರ ಮಾತಿಗೆ ಧ್ವನಿಗೂಡಿಸುತ್ತೇನೆ. ನೊಂದ ಕುಟುಂಬದವರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದರು.

ರಾಜ್ಯದ ಬಿಜೆಪಿ ನಾಯಕರೆಲ್ಲ ಒಗ್ಗಟ್ಟಿನಿಂದ ಇದ್ದಾರೆ. ಮುಂದಿನ ದಿನಗಳಲ್ಲಿಯೂ ಒಟ್ಟಾಗಿ ಇರುತ್ತೇವೆ. ಎಲ್ಲಾ ಹೋರಾಟದಲ್ಲಿಯೂ ಒಟ್ಟಾಗಿ ಇರುತ್ತೇವೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ಬರಬೇಕು. ಅದಕ್ಕೆ ಪೂರಕವಾದ ಕೆಲಸ ಮಾಡುತ್ತೇವೆ.

ಇನ್ನು, ಬಸನಗೌಡ ಪಾಟೀಲ್‌ ಯತ್ನಾಳ್ ವಿರುದ್ಧ ಬಿಜೆಪಿ ನಾಯಕರು ದೂರು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯದುವೀರ್‌, ಯತ್ನಾಳ್ ಅವರ ಬಗ್ಗೆ ಪಕ್ಷದ ವರಿಷ್ಠರು ಎಲ್ಲಾ ರೀತಿಯಲ್ಲಿ ಚರ್ಚೆ ಮಾಡಿ ಪರಿಹಾರ ಒದಗಿಸುತ್ತಾರೆ. ಅವರ ನಿಲುವಿಗೆ ನಾವು ಬದ್ದರಾಗಿರುತ್ತೇವೆ ಎಂದು ತಿಳಿಸಿದರು

Edited By : Ashok M
PublicNext

PublicNext

08/12/2024 07:56 pm

Cinque Terre

43.47 K

Cinque Terre

0

ಸಂಬಂಧಿತ ಸುದ್ದಿ