ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ಸರ್ವ ಜನಾಂಗಗಳ ಒಕ್ಕೂಟದ‌ ಕೊಡಗು ಬಂದ್‌ಗೆ ನೀರಸ ಪ್ರತಿಕ್ರಿಯೆ

ಕೊಡಗು : ಕಳೆದ ಕೆಲ ದಿನಗಳ‌ ಹಿಂದೆ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ ಬಗ್ಗೆ ವಕೀಲರೊಬ್ಬರು ಆಕ್ಷೇಪರ್ಹ ಸಂದೇಶವನ್ನು ವಾಟ್ಸಪ್ ಗ್ರೂಪ್ ನಲ್ಲಿ ಹರಿ ಬಿಟ್ಟಿದ್ದು ಇದು ಕೊಡಗಿನ ಸೇನಾನಿಗಳಿಗೆ ಮಾಡಿದ ಅಪಮಾನ ಎಂದು ಕೊಡಗಿ‌ಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ವಕೀಲರನ್ನ ಬಂಧಿಸಿ ಕೆಲವೇ ಸಮಯದಲ್ಲಿ ಬಿಡುಗಡೆಯನ್ನೂ ಮಾಡಲಾಗಿತ್ತು.ಇದರಿಂದ ಕೊಡಗಿನ ಕೆಲವರ ಆಕ್ರೋಶಕ್ಕೂ ಕಾರಣಾವಾಗಿತ್ತು. ಹಲವು ಪ್ರತಿಭಟನೆಗಳು ನಡೆದಿತ್ತು‌.

ಇಂದು ಸರ್ವಜನಾಂಗಗಳ ಒಕ್ಕೂಟ ವಕೀಲರನ್ನ ಗಡಿಪಾರು ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಅರ್ಧದಿನದ ಕೊಡಗು ಬಂದ್ ಗೆ ಕರೆ ನೀಡಿತ್ತು. ಆರಂಭದಲ್ಲಿ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದ್ರು ಕೂಡ ಇಂದು ಕೆಲವರು ಬಂದ್ ನೈತಿಕ ಬೆಂಬಲ‌ ಮಾತ್ರ ಘೊಸಿಸಿದ್ದಾರೆ. ಸರ್ವಜನಾಂಗಗಳ ಒಕ್ಕೂಟ ನೀಡಿದ ಬಂದ್ ಗೆ ಮಡಿಕೇರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಜಾನೆಯಿಂದಲೆ ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದು ಜನತೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದಾರೆ. ಇನ್ನೂ ಸರ್ಕಾರಿ ಬಸ್ ಕಚೇರಿಗಳು ಶಾಲೆಗಳು ಎಂದಿನಂತೆ ಆರಂಭವಾಗುತ್ತಿದ್ದೆ. ಆದ್ರೆ ಖಾಸಗಿ ವಲಯದ ಶಾಲೆಗಳು ಬಸ್ ಗಳು ಗೊಂದಲದಲ್ಲಿಯೆ ತೆರೆಯುತ್ತಿದೆ‌.

ಸದ್ಯದ ಮಟ್ಟಿಗೆ ಜಿಲ್ಲೆಗೆ ಯಾವುದೆ ಬಂದ್ ಬೀಸಿ ತಟ್ಟಿಲ್ಲ ಯಥಾ ಸ್ಥಿತಿ ಕಾಯ್ದುಕೊಂಡಿದ್ದು ಹತ್ತು ಗಂಟೆಯ ನಂತರ ಯಾವ ರೀತಿ ಬಂದ್ ವಾತವರಣ ಇರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಸದ್ಯ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು ಅಹಿತಕರ ಘಟನೆಗಳು ನಡೆಯದಂತರ ಎಚ್ಚರ ವಹಿಸಿದೆ.

Edited By : Ashok M
PublicNext

PublicNext

12/12/2024 10:09 am

Cinque Terre

4.92 K

Cinque Terre

0

ಸಂಬಂಧಿತ ಸುದ್ದಿ