ಎಲ್ಲೂರು: ಉಡುಪಿ ಜಿಲ್ಲೆಯ ಎಲ್ಲೂರು ಮಾಣಿಯೂರಿನಲ್ಲಿರುವ ಮುರಲಿ ಶೆಟ್ಟಿಯವರ ಮನೆಯ ಆವರಣದಿಂದ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಗುರುವಾರ ರಾತ್ರಿ 9:30 ರ ಸುಮಾರಿಗೆ ಘಟನೆ ನಡೆದಿದೆ.
ಮನೆ ಮಂದಿ ಬಾಗಿಲು ಹಾಕಿ ಮನೆಯೊಳಗೆ ಭಜನೆಯಲ್ಲಿ ನಿರತರಾಗಿದ್ದರು. ಈ ವೇಳೆ ಮನೆಯ ನಾಯಿ ಒಂದೇ ಸಮನೆ ಬೊಗಳುತ್ತಿತ್ತು. ಬಳಿಕ ನಾಯಿ ನಾಪತ್ತೆಯಾಗಿದೆ. ಇದನ್ನು ಗಮನಿಸಿದ ಮನೆಯವರು ಸಿಸಿ ಟಿವಿ ಪರಿಶೀಲಿಸಿದಾಗ ಕೃತ್ಯ ಗಮನಕ್ಕೆ ಬಂದಿದೆ. ಪದೇ ಪದೇ ಈ ಭಾಗದಲ್ಲಿ ಚಿರತೆ ಕಾಟ ಕೊಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
Kshetra Samachara
06/12/2024 01:09 pm