ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದನಿಗೆ ಪಟ್ಲ ಫೌಂಡೇಶನ್ ನಿಂದ ಸಹಾಯ ಹಸ್ತ

ಮುಲ್ಕಿ:ಯಕ್ಷಗಾನ ಪ್ರಪಂಚ ಕಂಡ ಅಪ್ರತಿಮ ವಿದ್ವಾಂಸ ಗಣೇಶ್ ಕೊಲೆಕಾಡಿ ರವರ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಮನಗಂಡು ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ 50,000 ರೂ ನೀಡಲಾಯಿತು. ಈ ಸಂದರ್ಭ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಈ ಹಿಂದೆ ಫೌಂಡೇಶನ್ ಸುಮಾರು 2 ಲಕ್ಷ ರೂಪಾಯಿವರೆಗೆ ಸಹಾಯ ಹಸ್ತ ನೀಡಲಾಗಿದ್ದು ಕಳೆದ 6 ವರ್ಷಗಳಿಂದ ಪ್ರತಿ ತಿಂಗಳು ಚಿಕಿತ್ಸಾ ವೆಚ್ಚಕ್ಕಾಗಿ 1000 ರೂ ನೀಡಲಾಗುತ್ತಿದೆ ಎಂದರು.

ಈ ಕಲಾವಿದರು ಕಳೆದ 18 ವರ್ಷಗಳಿಂದ ತೀರಾ ಅನಾರೋಗ್ಯದಿಂದ ಇದ್ದಾರೆ. ತಾಯಿ ಕೂಡ ತುಂಬಾ ಪ್ರಾಯದವರಗಿದ್ದು, ಮನೆಯಲ್ಲಿ ಊಟಕ್ಕೂ ಮದ್ದಿಗೂ ಪರದಾಡುವ ಸ್ಥಿತಿ,ಇದೆ ಇವರು ಕಲಾ ವಲಯಕ್ಕೆ ನೀಡಿದ ಕೊಡುಗೆ ಅಪಾರ.ತೀರಾ ಸಂಕಷ್ಟದಲ್ಲಿರುವ ಗಣೇಶ್ ಪೂಜಾರಿ ಕೊಲೆಕಾಡಿ ಕಲಾವಿದನ ಕಷ್ಟಕ್ಕೆ ಕೈ ಜೋಡಿಸಿ , ಫೋನ್ ಪೇ ಅಥವಾ ಗೂಗಲ್ ಪೇ ನಂಬರ್ 9482130381 ಸಂಪರ್ಕಿಸಬಹುದು ಎಂದರು.

ಈ ಸಂದರ್ಭ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಕೋಶಾಧಿಕಾರಿ ಸಿ ಎ ಸುದೇಶ್ ಕುಮಾರ್ ರೈ , ಕದ್ರಿ ನವನೀತ್ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರಾದ ವಿಜಯ್ ಕುಮಾರ್ ಮೊಯ್ಲೊಟ್ಟು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/12/2024 05:06 pm

Cinque Terre

1.15 K

Cinque Terre

0

ಸಂಬಂಧಿತ ಸುದ್ದಿ