ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನ್ಯಾಯಾಲಯದಲ್ಲಿ ವಕೀಲರ ದಿನಾಚರಣೆ - ನ್ಯಾಯಮೂರ್ತಿಗಳಿಗೆ ಸನ್ಮಾನ

ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆಯಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪ ಲೋಕಾಯುಕ್ತ ನ್ಯಾ| ಬಿ.ವೀರಪ್ಪ ,ಕಠಿನ ಶ್ರಮ, ಶೃದ್ಧೆ, ಏಕಾಗ್ರತೆಯಿಂದ ಪರಿಪೂರ್ಣ ನ್ಯಾಯವಾದಿಗಳಾಗಬಹುದು. ಭ್ರಷ್ಟಾಚಾರದ ವಿರುದ್ಧ ವಕೀಲರ ಸಂಘಗಳು ಕಾರ್ಯೋನ್ಮುಖವಾಗಬೇಕು. ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಿದರೆ ಮಾತ್ರ ಸೂಕ್ತ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್‌ ಎಸ್‌. ಗಂಗಣ್ಣನವರ್‌ ಅಧ್ಯಕ್ಷತೆ ವಹಿಸಿದ್ದರು. ಉಪಲೋಕಾಯುಕ್ತ ನ್ಯಾ| ಬಿ. ವೀರಪ್ಪ ಹಾಗೂ ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾ| ಎ.ಎಸ್‌.ಬೋಪಣ್ಣ ಅವರನ್ನು ಸಮ್ಮಾನಿಸಲಾಯಿತು.

Edited By : PublicNext Desk
Kshetra Samachara

Kshetra Samachara

04/12/2024 11:37 am

Cinque Terre

614

Cinque Terre

0

ಸಂಬಂಧಿತ ಸುದ್ದಿ