ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಬದುಕು ಭಗವಂತ ಕೊಟ್ಟ ಪ್ರಸಾದ, ಸಮಾಜಕ್ಕೆ ಅರ್ಪಿಸಿ ಸಾಧಕರಾಗೋಣ"

ಮುಲ್ಕಿ: ರಾಮಕೃಷ್ಣ ಪೂಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟಿ ಭಾಸ್ಕರ್ ಪೂಂಜ ಸಹಕಾರದೊಂದಿಗೆ ಅಸಹಾಯಕರಿಗೆ ಸಹಾಯಹಸ್ತ, ವೈದ್ಯಕೀಯ ಚಿಕಿತ್ಸೆ, ಉನ್ನತ ಶಿಕ್ಷಣಕ್ಕೆ ನೆರವು ಹಾಗೂ ಸಾಧಕ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ಸಮಾರಂಭ ಮುಲ್ಕಿಯ ಕಾರ್ನಾಡ್ ಪೂಂಜ ವಿಲ್ಲಾದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಲ್ಕಿ- ಮೂಡುಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಸಹಾಯಹಸ್ತ ಅಭಿನಂದನೀಯ ಎಂದರು. ಮುಖ್ಯ ಅತಿಥಿಯಾಗಿ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಬದುಕು ಭಗವಂತ ಕೊಟ್ಟ ಪ್ರಸಾದವಾಗಿದ್ದು, ಅದನ್ನು ಸಮಾಜಕ್ಕೆ ಅರ್ಪಿಸಿದರೆ ಸಾಧಕರಾಗಲು ಸಾಧ್ಯ ಎಂದರು. ಅಧ್ಯಕ್ಷತೆಯನ್ನು ಪೂಂಜ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರವಿಂದ ಪೂಂಜ ವಹಿಸಿ ಮಾತನಾಡಿ, ಟ್ರಸ್ಟ್ ಬಡವರ ಏಳಿಗೆಗೆ ಶ್ರಮಿಸುತ್ತಿದ್ದು, ನೆರವು ನಿರಂತರವಾಗಿ ನಡೆಯಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷರಾದ ಸುನಿಲ್ ಆಳ್ವ, ಸುಭಾಷ್ ಶೆಟ್ಟಿ, ಸದಸ್ಯ ಹರ್ಷರಾಜ ಶೆಟ್ಟಿ, ಪೂಂಜ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಆದಿತ್ಯ ಪೂಂಜ, ನಿರ್ದೇಶಕರಾದ ಮುರಳೀಧರ ಭಂಡಾರಿ, ಸಾಯಿನಾಥ ಶೆಟ್ಟಿ, ಶರತ್ ಶೆಟ್ಟಿ ಸಂಕಲಕರಿಯ, ಉದಯ್ ಕುಮಾರ್ ಶೆಟ್ಟಿ ಅಧಿಧನ್, ನಿವೃತ್ತ ಉಪನ್ಯಾಸಕ ವೈ.ಎನ್. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಪೂಂಜ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರವಿಂದ ಪೂಂಜ ಸ್ವಾಗತಿಸಿದರು, ಟ್ರಸ್ಟಿ ಆದಿತ್ಯ ಪೂಂಜ ಧನ್ಯವಾದ ಅರ್ಪಿಸಿದರು. ವೈ. ಎನ್. ಸಾಲ್ಯಾನ್ ನಿರೂಪಿಸಿದರು. ಬಳಿಕ ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಅಸಹಾಯಕರಿಗೆ ಸಹಾಯಹಸ್ತ, ಶಿಕ್ಷಣ ಹಾಗೂ ಕ್ರೀಡಾ ಸಾಧಕರಿಗೆ ಗೌರವಾರ್ಪಣೆ, ಮಾನವೀಯ ನೆರವು ನೀಡಲಾಯಿತು.

Edited By : Manjunath H D
Kshetra Samachara

Kshetra Samachara

04/12/2024 04:17 pm

Cinque Terre

7.33 K

Cinque Terre

0

ಸಂಬಂಧಿತ ಸುದ್ದಿ