ನೆಲಮಂಗಲ: ದ್ವಿಚಕ್ರವಾಹನಕ್ಕೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನೆಲಮಂಗಲ ತಾಲ್ಲೂಕು ರಾ.ಹೆ 75ರ ತುಮಕೂರು ರಸ್ತೆ, ಬೂದಿಹಾಳ್ ಗ್ರಾಮದ ಬಳಿ ನೆಡೆದಿದೆ.
ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಹೋಬಳಿಯ ತಿಪ್ಪಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಟಿ.ಎ ನರಸಿಂಹ ಮೂರ್ತಿ 51 ವರ್ಷ ಮೃತ ದುರ್ದೈವಿಯಾಗಿದ್ದು, ಕಳೆದ 5 ವರ್ಷ ದಿಂದ ನೆಲಮಂಗಲ ತಾಲ್ಲೂಕು ಆರ್ಡಿಪಿಆರ್ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಈ ಮುಂಚೆಯೂ ಕೂಡ ತಾಲ್ಲೂಕಿನ ಇತರೆ ಸರ್ಕಾರಿ ಇಲಾಖೆಗಳಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾಗಿದೆ.
ಇಂದು ಸಂಜೆ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ತೆರಳುವಾಗ ಬೂದಿಹಾಳ್ ಬಳಿ ಕ್ಯಾಂಟರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ನರಸಿಂಹಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕ್ಯಾಂಟರ್ ವಾಹನ ಚಾಲಕನ ಅಜಾಗರೂತೆಯಿಂದ ಈ ಘಟನೆ ನೆಡೆದಿದ್ದು, ಘಟನೆ ಬಳಿಕ ಕ್ಯಾಂಟರ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಸದ್ಯ ವಾಹನವನ್ನು ವಶಕ್ಕೆ ಪಡೆದ ನೆಲಮಂಗಲ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
02/12/2024 10:48 pm