ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್‌ನಲ್ಲಿ ಯುವಕನ ಕೊಲೆ ಪ್ರಕರಣ - ಇಬ್ಬರು ಆರೋಪಿಗಳ ಬಂಧನ

ಬೀದರ್ : ಯುವಕನೊಬ್ಬನ ತಲೆಗೆ ಗಟ್ಟಿಯಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನವೆಂಬರ್ 29ರಂದು ಬೀದರ್ ನಗರದ ಹಳೆ ಆದರ್ಶ ಕಾಲೋನಿಯ ನಿವಾಸಿ ಅಂಬರೀಶ್ (28) ಎಂಬ ಯುವಕನನ್ನು ಗಣೇಶ ಮೈದಾನದ ಹತ್ತಿರ ಉಳ್ಳಾಗಡ್ಡೆ ಅವರ ಮದ್ಯದ ಅಂಗಡಿಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ನಗರದ ನೂತನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆ ಆರೋಪಿಗಳ ಶೋಧಕಾರ್ಯ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಅಂಬರೀಶ್ ಮದ್ಯ ಕುಡಿದು ನಮ್ಮೊಂದಿಗೆ ಯಾವಾಗಲೂ ಜಗಳ ಮಾಡುತಿದ್ದ. ಹಾಗಾಗಿ ಅವನನ್ನು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ತಿಳಿಸಿದ್ದಾರೆ.

ನೂತನ ನಗರ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿಜಯಕುಮಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪ್ರಕಾಶ, ನಿಂಗಪ್ಪ, ಭರತ್‌, ನವೀನ್‌, ಗಂಗಾಧರ, ಸುಧಾಕರ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

ಪತ್ರಿಕೆಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವನಗೌಡ ಪಾಟೀಲ, ಡಿವೈಎಸ್ಪಿ ಡಿಎಆರ್‌ ಶರಣಬಸಪ್ಪ ಕೂಡ್ಲಿ ಹಾಜರಿದ್ದರು.

Edited By : Manjunath H D
PublicNext

PublicNext

02/12/2024 08:51 pm

Cinque Terre

16.31 K

Cinque Terre

0

ಸಂಬಂಧಿತ ಸುದ್ದಿ