ಬೀದರ್: ಸಾಲಬಾಧೆಯಿಂದ ತತ್ತರಿಸಿದ ರೈತನೋರ್ವ ಹೊಲದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೃತಪಟ್ಟಿದ್ದ ಘಟನೆ ಭಾಲ್ಕಿ ತಾಲೂಕಿನ ವಾಂಝರಖೇಡಾ ಗ್ರಾಮ ಪಂಚಾಯತ್ ನಲ್ಲಿ ಬರುವ ಕೊಂಗಳಿ ಗ್ರಾಮದಲ್ಲಿ ನಡೆದಿದೆ.
ನಾಗನಾಥ ತುಕಾರಾಮ ಡೋಬಳೆ (50) ಮೃತಪಟ್ಟ ರೈತ.
ಪಿಕೆಪಿಎಸ್ ಸಹಕಾರ ಸಂಘದಿಂದ 1.95 ಲಕ್ಷ ರೂ. ಸಾಲ ಪಡೆದಿದ್ದರು. ಅಲ್ಲದೆ ಖಾಸಗಿಯವರಿಂದಲೂ ಸಾಲ ಪಡೆದಿದ್ದರು. ಬೆಳೆದ ಫಸಲು ಕೈಗೆ ಸಿಗದೆ ನಷ್ಟವುಂಟಾಗಿದ್ದರಿಂದ ಆರ್ಥಿಕ ಅಡಚಣೆಗೆ ಒಳಗಾಗಿದ್ದರು ಎಂದು ಮೃತರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಎಎಸ್ಸೈ ಶರಣಪ್ಪಾ ಪಟ್ನೆ, ಏಸಬಿ ಶ್ರೀಶೈಲಗಿರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/11/2024 04:11 pm