ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: 16 ಲಕ್ಷ ಮೌಲ್ಯದ ಶ್ರೀಗಂಧ ವಶ- ತೆಲಂಗಾಣದ ಓರ್ವ ಆರೋಪಿ ಬಂಧನ

ಬೀದರ್: ಬಸವಕಲ್ಯಾಣ ತಾಲ್ಲೂಕಿನಲ್ಲಿ ಅಕ್ರಮವಾಗಿ ನೆರೆ ರಾಜ್ಯಕ್ಕೆ ಸಾಗಿಸುತ್ತಿದ್ದ 16 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ ಜಪ್ತಿ

ಮಾಡುವುದರಲ್ಲಿ ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ತೆಲಂಗಾಣ ರಾಜ್ಯದ ಶಂಶಾಬಾದ್ ಮೂಲದ ಪಿ.ಕೆ. ಬದ್ರುದ್ದೀನ್ ಬಂಧಿತ ಆರೋಪಿಯಾಗಿದ್ದಾನೆ.

ತೆಲಂಗಾಣ ರಾಜ್ಯದಿಂದ ಮಹಾರಾಷ್ಟ್ರದ ಮುಂಬೈ ಮಹಾನಗರಕ್ಕೆ ಅಕ್ರಮವಾಗಿ ಮಾರಾಟ ಮಾಡಲೆಂದು ಗೂಡ್ಸ್ ವಾಹನದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಸಸ್ತಾಪುರ ಬಂಗ್ಲಾದ ಸಮೀಪದ ಮುಡಬಿ ಕ್ರಾಸ್‌ ಬಳಿ ದಾಳಿ ನಡೆಸಿದ ನಗರ ಠಾಣೆ ಪಿಎಸ್‌ಐ ಅಂಬ್ರಿಷ್ ವಾಗೋಡೆ ಹಾಗೂ ವಲಯ ಅರಣ್ಯ ಅಧಿಕಾರಿ ಮಹೇಂದ್ರ ಮೌರ್ಯ ಹಾಗೂ ಸಂತೋಷ ಯಾಚೆ ಅವರ ನೇತೃತ್ವದ ಅಧಿಕಾರಿಗಳ ತಂಡ 16 ಲಕ್ಷ ರೂಪಾಯಿ ಮೌಲ್ಯದ ಒಂದು ಕ್ವಿಂಟಾಲ್ ಶ್ರೀಗಂಧ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

28/11/2024 10:28 pm

Cinque Terre

31.53 K

Cinque Terre

0

ಸಂಬಂಧಿತ ಸುದ್ದಿ