ಚಿಕ್ಕಬಳ್ಳಾಪುರ : ಮೂವರು ಅಂತರ್ ರಾಜ್ಯ ಕುಖ್ಯಾತ ಸರಗಳ್ಳರು ಹಾಗೂ ಒಬ್ಬ ಮನೆಗಳ್ಳನನ್ನ ಪತ್ತೆ ಹಚ್ಚಿ ನಾಲ್ಕು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಅಪಾರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ್ ತಾಲೂಕಿನ ಜೈಸಿಂಗ್ಪುರ ಗಾಂಧಿನಗರದ ವಾಸಿಗಳಾದ ಅಬ್ಬಾಸ್ ಮುನೀರ್ ಇರಾನಿ ಟೈಗರ್ ಬಿನ್ ಮುನೀರ್ ಶರೀಫ್ ಬಾಧೆ ಇರಾನಿ, ಅಬ್ಬಾಸ್ ಏಜಾಸ್ ಇರಾನಿ, ಬಿನ್ ಏಜಾಸ್, ಜಾವೀದ್ ಜಹಾಂಗೀರ್ ಇರಾನಿ ಬಿನ್ ಲೇಟ್ ಜಹಾಂಗೀರ್ ಹಾಗೂ ಮನೆಗಳ್ಳನನ್ನು ಗೌರಿಬಿದನೂರು ನಗರ ಹಿರೇಬಿದನೂರು ವಾಸಿಯಾದ ಮೆಹಬೂಬ್ ಪಾಷಾ ಬಾದ್ ಅಹ್ಮದ್ ಎಂದು ತಿಳಿದುಬಂದಿದೆ.
ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯ ಪ್ರವೃತ್ತರಾಗಲು ಎಸ್ಪಿ ಕುಶಲ್ ಚೌಕ್ಸೆ, ಅಪರ ಪೊಲೀಸ್ ಅಧಿಕ್ಷಕರಾದ ಆರ್ ಐ ಖಾಸೀಂ ಹಾಗೂ ಚಿಕ್ಕಬಳ್ಳಾಪುರ ವಿಭಾಗ ಪೊಲೀಸ್ ಉಪಾದೀಕ್ಷಕರಾದ ಶಿವಕುಮಾರ್ ಮಾರ್ಗದರ್ಶನದಲ್ಲಿ ಗೌರಿಬಿದನೂರು ವೃತ್ತದ ಸಿಪಿಐ ಕೆಪಿ ಸತ್ಯನಾರಾಯಣ ಮತ್ತು ಮೂರು ಪೋಲಿಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರಗಳಾದ ಗೌರಿಬಿದನೂರು ಗ್ರಾಮಾಂತರ ಠಾಣೆ ರಮೇಶ್ ಗುಗ್ಗುರಿ, ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಟಿಎನ್ ಮೂರ್ತಿ, ಗೌರಿಬಿದನೂರು ನಗರ ಠಾಣೆಯ ಪಿಎಸ್ಐ ಚಂದ್ರಕಲಾ ಎನ್, ಸಿಬ್ಬಂದಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
PublicNext
02/12/2024 02:43 pm