ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ಸಚಿವರಾದ ಡಾ.ಕೆಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಇನ್ನು ಹಲವು ನಾಯಕರ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ ಎಲ್ಲಿ ಅಂತೀರಾ ಇಲ್ಲಿದೆ ನೋಡಿ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮೋಹಿತ್ ನರಸಿಂಹಮೂರ್ತಿ ಎಂಬುವ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಮನಸ್ಸಿಗೆ ಬದಂತೆ ಅವಹೇಳನಕಾರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ಸಚಿವರಾದ ಡಾ.ಕೆಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಇನ್ನು ಹಲವು ನಾಯಕರ ವಿರುದ್ಧವಾಗಿ ಮಾತನಾಡಿದ್ದಾನೆ. ಈ ವ್ಯಕ್ತಿ ಸುಮಾರು ದಿನಗಳಿಂದ ದಿನಕ್ಕೊಬ್ಬರ ಸಚಿವರನ್ನ ಅವಹೇಳನಾಕಾರಿಯಾಗಿ ನಿಂದಿಸಿ ಅವರನ್ನ ಅವಮಾನ ಗೊಳಿಸಿದ್ದಾರೆ. ಅತ್ಯಂತ ಗೌರವಯುತ ನಾಯಕರನ್ನು ಈ ರೀತಿ ಮಾತನಾಡಿರುವುದಕ್ಕೆ ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ.
ಇವರ ವಿರುದ್ಧ ಶಿಡ್ಲಘಟ್ಟ ನಗರ ಠಾಣೆಯಲ್ಲಿ ದೂರು ದಾಖಲಿಸಿ ತಕ್ಷಣ ಬಂಧಿಸಬೇಕು ಎಂದು ಐಎನ್ ಟಿಯು ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ ಒತ್ತಾಯಿಸಿದ್ದಾರೆ ಒತ್ತಾಯಿಸಲಾಗಿದೆ.
PublicNext
29/11/2024 05:47 pm