ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಕಾರ್ಮಿಕರು ತಮ್ಮ ಹಕ್ಕನ್ನು ತಿಳಿದು ಬದುಕಬೇಕು

ಚಿಕ್ಕಬಳ್ಳಾಪುರ : ಕಾರ್ಮಿಕರು ತಮ್ಮ ಹಕ್ಕನ್ನು ತಿಳಿದು ಬದುಕಲು ಕಲಿತರೆ ಅವರಿಗೂ ಒಳ್ಳೆಯ ಬದುಕು ಸಿಗುತ್ತದೆ. ಅದಕ್ಕಾಗಿ ಕಾರ್ಮಿಕ ವರ್ಗಕ್ಕೆ ಮಾಹಿತಿಯನ್ನು ಉಚಿತವಾಗಿ ನೀಡಲು ನ್ಯಾಯಾಲಯ ಕೂಡಾ ಪ್ರಯತ್ನ ಮಾಡುತ್ತಿದೆ. ತಾಲೂಕಿನ ಎಲ್ಲ ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಗೆ ಸದಸ್ಯರಾಗುವ ಮೂಲಕ ಸರ್ಕಾರದ ಸದುದ್ದೇಶವನ್ನು ಸಾಕಾರಗೊಳಿಸಬೇಕು ಎಂದು ಚಿಕ್ಕಬಳ್ಳಾಪುರ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಹೇಳಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಕಾಲೇಜು ಮೆಮೋರಿಯಲ್ ಹಾಲ್ ನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಲಯ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ತಾಲೂಕು ಸಮಿತಿ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಕಟ್ಟಡ ಕಾರ್ಮಿಕರಿಗೆ ಕಾನೂನು ಮಾಹಿತಿ, ಸವಲತ್ತುಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಟ್ಟಡ ಕಾರ್ಮಿಕರ ಕೆಲಸ ಅಪಾಯಕಾರಿ ಕೆಲಸ. ಈ ಕೆಲಸ ಮಾಡುವವರು ಕಾನೂನು ರಕ್ಷಣೆಯನ್ನಾದರೂ ಪಡಕೊಳ್ಳಬೇಕು. ಕಾರ್ಮಿಕರಿಗೆ ಎಲ್ಲಿ ಯಾವಾಗ ಮಾಹಿತಿ ಬೇಕಿದ್ದರೂ ಕೊಡಲು ನಾವು ಸಿದ್ಧ ಎಂದರು. ಈ ಸಂದರ್ಭ ಕಟ್ಟಡ ಕಾರ್ಮಿಕರಿಗೆ ಬರಬೇಕಾಗಿದ್ದ ಸವಲತ್ತುಗಳನ್ನ ಸೂಕ್ತ ಸಮಯಕ್ಕೆ ನೀಡಬೇಕೆಂದು ಸಂಬಂಧ ಪಟ್ಟ ಇಲಾಖೆಗೆ ಕಳುಹಿಸಿ ಸವಲತ್ತುಗಳನ್ನು ತ್ವರಿತ ವಿಲೆವಾರಿಗೆ ಸೂಚಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.

ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ನೊಂದಣಿ ಮಾಡಿಸಿ ಕಾರ್ಮಿಕರಿಗೆ ನ್ಯಾಯಾಧೀಶರು ಕಟ್ಟಡ ಕಾರ್ಮಿಕ ರ ಕಾರ್ಡ್ ವಿತರಿಸಿರಿಸಿದರು. ಎಲ್ಲಾ ಕಟ್ಟಡ ಕಾರ್ಮಿಕರಿಗೆ ನೊಂದಣಿ ನವೀಕರಣ, ಹೊಸ ತಂತ್ರಾಂಶದಲ್ಲಿ ಅರ್ಜಿ ಹಾಕುವ‌ ಬಗ್ಗೆ ತಾಲ್ಲೂಕು ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ನಿರೀಕ್ಷಕಿ ಮಂಜುಳ,ಕಾರ್ಮಿಕರು ಹಾಗೂ ಮತ್ತಿತರರು ಇದ್ದರು.

ಸ್ಲಗ್ : ಕಟ್ಟಡ ಕಾರ್ಮಿಕರಿಗೆ ಕಾರ್ಯಗಾರ

Edited By : Nagaraj Tulugeri
Kshetra Samachara

Kshetra Samachara

29/11/2024 08:47 pm

Cinque Terre

2.84 K

Cinque Terre

0

ಸಂಬಂಧಿತ ಸುದ್ದಿ