ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲಾ ವಕೀಲರ ಸಂಘದ ಖಜಾಂಚಿಯಾಗಿ ಆಯುಬ್ ಖಾನ್ ಆಯ್ಕೆ

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ವಕೀಲರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ, ಕಾರ್ಯದರ್ಶಿ ಖಜಾಂಚಿ ಸೇರಿ 20 ಮಂದಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 420 ಒಟ್ಟು ಮತಗಳ ಪೈಕಿ 413 ಮತಗಳು ಚಲಾವಣೆಗೊಂಡಿದ್ದು ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಹಿರಿಯ ವಕೀಲ ಕೆ.ಹೆಚ್ ತಮ್ಮೇಗೌಡ, ಕೆ.ಎಂ,ಗೋವಿಂದರೆಡ್ಡಿ,ಆರ್. ಮಟಮಪ್ಪ,ಯುವ ವಕೀಲ ಕೆ.ವಿ.ಅಭಿಲಾಷ್ ಸ್ಪರ್ಧೆ ಮಾಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ವಿ.ಬಾಲಾಜಿ, ಹೆಚ್, ಮುನಿರಾಜು, ಎಂ.ಜೆ.ರಾಮು, ಪ್ರಧಾನ ಕಾರ್ಯ ದರ್ಶಿ ಸ್ಥಾನಕ್ಕೆ ಟಿ.ಎಂ.ವೆಂಕಟೇಶ್, ಜಿ.ಎಸ್.ಹರಿಕೃಷ್ಣ,ಮಂಜುನಾಥ್, ಜಂಟಿ ಕಾರ್ಯದರ್ಶಿ ಚಂದ್ರಶೇಖರ್, ಬಿ.ಆರ್. ಶ್ರೀದೇವಿ,ಖಜಾಂಚಿ ಸ್ಥಾನಕ್ಕೆ ಅಯೂಬ್ ಖಾನ್, ಕೆ.ಎನ್. ಶಿವಾರೆಡ್ಡಿ,ಆರ್.ಬಿ.ದೇವರೆಡ್ಡಿ, ಸ್ಪರ್ಧಿಸಿದ್ದರು.

ಖಜಾಂಚಿ ಸ್ಥಾನಕ್ಕೆ ಖ್ಯಾತ ವಕೀಲರಾದ ಅಯೂಬ್ ಖಾನ್ ರವರು 178 ಮತಗಳು ಪಡೆದು ಪ್ರತಿಸ್ಪರ್ಧಿಗಳಿಂದ 52 ಮತಗಳು ಹೆಚ್ಚು ಪಡೆಯುವದರ ಮೂಲಕ ಆಯ್ಕೆಗೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

29/11/2024 10:00 pm

Cinque Terre

1.8 K

Cinque Terre

0