ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಸಿಗಂಧೂರು ಕೇಬಲ್ ಆಧಾರಿತ ಸೇತುವೆ ಕಾಮಗಾರಿ ಬಹುತೇಕ ಪೂರ್ಣ: ಮುಂದಿನ 4 ತಿಂಗಳಲ್ಲಿ ಈಡೇರಲಿದೆ ಬಹುದಿನಗಳ ಕನಸು

ಸಾಗರ: ರಾಜ್ಯದಲ್ಲಿ ಮಲೆನಾಡಿನ ಎರಡು ಪ್ರಮುಖ ದೇವಾಲಯ ಪಟ್ಟಣಗಳಾದ ಕೊಲ್ಲೂರು ಹಾಗೂ ಸಿಗಂಧೂರು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಲಾಗುತ್ತಿರುವ 2.13 ಕಿ.ಮೀ. ಉದ್ದದ ಸಿಗಂಧೂರು ಕೇಬಕ್ ಬ್ರಿಡ್ಸ್ (ತುಮರಿ ಸೇತುವೆ) ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ.

ಈ ಸಿಗಂಧೂರು ಸೇತುವೆಯು ಭಾರತದ ಕೇಬಲ್ ಆಧಾರಿತ ಸೇತುವೆಗಳಲ್ಲಿ 7ನೇ ಅತೀ ದೊಡ್ಡ ಸೇತುವೆ ಎಂಬ ಖ್ಯಾತಿ ಪಡೆಯಲಿದೆ. ಹಲವು ವರ್ಷಗಳಿಂದ ಈ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಇನ್ನು ಕೆಲವೇ ಗರ್ಡರ್ ಬಾಕ್ಸ್‌ಗಳನ್ನು ಅಳವಡಿಕೆ ಮಾಡುವುದು ಮಾತ್ರ ಬಾಕಿಯಿದ್ದು, ಕೆಲವೇ ಒಂದೆರಡು ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಇದಾದ ನಂತರ ಉಳಿಕೆ ಕೆಲಸಗಳನ್ನು ಮಗಿಸಿಕೊಂಡು, ಸುರಕ್ಷತಾ ತಪಾಸಣೆ ಮಾಡಿದ ನಂತರ ಈ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಇದರಿಂದ ಮಲೆನಾಡಿನ ಜನರ ಬಹುಬೇಡಿಕೆಯ ಸಿಗಂಧೂರು ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಸಿಗಂಧೂರು ಕೇಬಲ್ ಸೇತುವೆಯು ನಮ್ಮ ದೇಶದ 7ನೇ ಅತಿದೊಡ್ಡ ಕೇಬಲ್ ಆಧರಿತ ಹಾಗೂ ಭಾರತದ 2ನೇ ಅತೀ ಉದ್ದದ ಸೇತುವೆ ಎನಿಸಿಕೊಳ್ಳಲಿದೆ. ಈ ಸೇತುವೆಗೆ 17 ಪಿಲ್ಲರ್‌ಗಳಿದ್ದು, ಒಟ್ಟು 2.4 ಕಿಲೋ ಮೀಟರ್ ಉದ್ದವನ್ನು ಹೊಂದಿದೆ. ಇದೀಗ ಸೇತುವೆ ನಿರ್ಮಾಣದ ಅಂತಿಮ ಹಂತದ ಕೆಲಸಗಳು ಬಾಕಿ ಇದ್ದು, 2025ರ ಮಾರ್ಚ್‌ ತಿಂಗಳಲ್ಲಿ ಕೇಂದ್ರ ಹೆದ್ದಾರಿ ಸಚಿವ ಸಚಿವ ನಿತಿನ್ ಗಡ್ಕರಿ ಅವರು ಈ ಸೇತುವೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಮೂಲಕ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ 'ಸಿಗಂದೂರು ಸೇತುವೆ' ಸಿಗಂದೂರು ಚೌಡೇಶ್ವರಿ ದೇವಿಯ ಭಕ್ತರು ಸೇರಿದಂತೆ ಈ ಭಾಗದ ಜನರ ಬಹುದಿನಗಳ ಕನಸು ಈಡೇರಲಿದೆ.

ವರದಿ : ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ)

Edited By : PublicNext Desk
Kshetra Samachara

Kshetra Samachara

30/11/2024 12:26 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ