ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಬಿಂದಿಗೆ, ಪಾತ್ರೆ ಹಿಡಿದು ನೀರಿಗಾಗಿ ಮುಗಿಬಿದ್ದ ಗ್ರಾಮಸ್ಥರು

ಚಳ್ಳಕೆರೆ: ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ವರವಿನೋರಹಟ್ಟಿ ಗ್ರಾಮದಲ್ಲಿ ನಾಲ್ಕು ದಿನಗಳಿಂದ ನೀರಿಗಾಗಿ ಆಹಾಕಾರ ಉಂಟಾದ ಹಿನ್ನಲೆ ಶನಿವಾರ ಟ್ಯಾಂಕರ್ ನೀರಿಗೆ ಮುಗಿಬಿದ್ದದ್ದರು.

ಬೊಮ್ಮದೇವರಹಟ್ಟಿ ಬಳಿರುವ ಸೊಮಲುಕೆರೆಯಲ್ಲಿದ್ದ ಕುಡಿಯುವ ನೀರಿನ ಕೊಳವೆಬಾವಿ ಮುಳುಗಡೆಯಾಗಿರುವುದರಿಂದ ಗಡ್ಡದಾರಹಟ್ಟಿ ಹಳ್ಳದಲ್ಲಿರುವ ಕೊಳವೆಬಾವಿಯಿಂದ ತಾತ್ಕಾಲಿಕವಾಗಿ ನೀರು ಪೂರೈಕೆ ಮಾಡಲಾಗಿತ್ತು. ಆದರೆ ಕೊಳವೆ ಬಾವಿಗೆ ವಿದ್ಯುತ್ ಆಡಚಣೆಯಾಗಿರುವ ಹಿನ್ನಲೆಯಿಂದ ನಾಲ್ಕು ದಿನಗಳಿಂದ ವರವಿನೋರಹಟ್ಟಿ ಗ್ರಾಮಕ್ಕೆ ನೀರು ಪೂರೈಕೆಯಾಗದೆ ಇರುವುದರಿಂದ ಗ್ರಾಮದಲ್ಲಿ ನೀರಿಗೆ ಕೊರತೆಯಾಗಿದೆ. ಗ್ರಾಮ ಪಂಚಾಯತಿ ಅಧಕಾರಿಗಳು ಶನಿವಾರ ಗ್ರಾಮಕ್ಕೆ ಒಂದು ಟ್ಯಾಂಕರ್ ನೀರು ಸರಬರಾಜು ಮಾಡಿದ್ದಾರೆ. ಇದರಿಂದ ಕೆಲವು ಮನೆಗಳಿಗೆ ನೀರು ಸಿಕ್ಕರೆ, ಮತ್ತೆ ಕೆಲವರಿಗೆ ನೀರು ಸಿಗದೇ ದೂರದ ರೈತರ ಕೊಳವೆಬಾವಿಗಳಿಗೆ ಹೋಗಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಿಡಿಷಾಪ ಹಾಕಿಕೊಂಡು ನೀರು ಹೊತ್ತು ತರುವ ಪರಿಸ್ಥಿತಿಯಾಗಿದೆ.

Edited By : Somashekar
PublicNext

PublicNext

30/11/2024 12:01 pm

Cinque Terre

19.5 K

Cinque Terre

0