ಸಾಗರ: ಕೋವಿಡ್ ಕಾಲದ ಅಕ್ರಮ ಕುರಿತು ಎಸ್‌ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಎಸ್.ಐ.ಟಿ ವರದಿ ಬಂದ ನಂತರ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಸಚಿವ ಸಂಪುಟ ಸಭೆ ಗುರುವಾರ ಅಥವಾ ಶುಕ್ರವಾರ ನಡೆಯಲಿದೆ. ಕೋವಿಡ್ ಕಾಲದ ಭ್ರಷ್ಟಾಚಾರ ವ್ಯವಸ್ಥಿತ ತನಿಖೆ ಆಗಬೇಕು. ಯಾರ ಮೇಲೂ ದ್ವೇಷ ಸಾಧಿಸಬೇಕು ಎಂಬುದು ತನಿಖೆಯ ಉದ್ದೇಶವಲ್ಲ. ಜಸ್ಟಿಸ್ ಕುನ್ನಾ ಅವರ ವರದಿಯಲ್ಲಿ ಕೆಲವು ಅಂಶಗಳು ಬಹಿರಂಗವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕ್ರಮದ ಜೊತೆಗೆ ಎಸ್.ಐ.ಟಿ. ತನಿಖೆ ಸಹ ಸರ್ಕಾರದ ಹಂತದಲ್ಲಿ ನಡೆಯುತ್ತದೆ ಎಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
PublicNext
26/11/2024 11:10 pm