ಬೆಂಗಳೂರು: ದೇಶದಲ್ಲಿ ಎಲ್ಲ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ.
ವಕ್ಫ್ ವಿರುದ್ಧವಾಗಿ ಈಗಾಗಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ಬೀದರ್ನಿಂದ ಹೋರಾಟ ಆರಂಭಿಸಿದ್ದು, ಇದೇ ವಿಚಾರವಾಗಿ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಎಲ್ಲರೂ ಸೇರಿ ದೇಶದಲ್ಲಿ ವಕ್ಫ್ ಮಂಡಳಿ ಇಲ್ಲದಂತೆ ಮಾಡಬೇಕು. ರೈತರ ಪರವಾಗಿ ಜಮೀನು ಉಳಿಸಲು ಬೇಕಾದ ಹೋರಾಟಮಾಡೋಣ. ಸರ್ಕಾರ ಬಿದ್ದು ಹೋದರೂ ಪರವಾಗಿಲ್ಲ ನಾವೆಲ್ಲರೂ ಹೋರಾಡೋಣ. ಎಂದು ಬೆಂಗಳೂರಿನಲ್ಲಿ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ನೀಡಿದರು.
PublicNext
26/11/2024 08:46 pm