ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾವನೆಗಳಿಗೆ ಮೊದಲ ಸ್ಥಾನ, ಸೆಕ್ಸ್‌ ಕೊನೆಗೆ... ಇದು ಡೆಮಿಸೆಕ್ಷುವಲ್ ಸಿದ್ಧಾಂತ

ಬೈ ಸೆಕ್ಷುವಲ್‌, ಲೆಸ್‌ ಬಿಯನ್‌, ಗೇ ಅಂತೆಲ್ಲಾ ಕೇಳಿದ್ದೇವೆ ಹಾಗಾದ್ರೆ ಏನಿದು ಡೆಮಿಸೆಕ್ಷುವಲ್? ಇದರ ಬಗ್ಗೆ ಕೇಳೆ ಇಲ್ವಲ್ಲ ಅಂತನಾ. ಡೆಮಿಸೆಕ್ಷುವಲ್‌ ಅಂದರೆ ಒಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಜೊತೆ ನಿಜವಾದ ಭಾವನಾತ್ಮಕ ಸಂಬಂಧವನ್ನು ಹೊಂದಿದ ಮೇಲೆಯಷ್ಟೇ ಆ ವ್ಯಕ್ತಿಯ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಎಂದರ್ಥ.ಅಂದ್ರೆ ಒಬ್ಬ ವ್ಯಕ್ತಿ ಎಷ್ಟೇ ಲೈಂಗಿಕವಾಗಿ ಆಕರ್ಷಿತನಾಗಿದ್ದರೂ ಭಾವನಾತ್ಮಕ ಸಂಬಂಧ ಇರದೇ ಆತನ ಜೊತೆ ಸೆಕ್ಸ್‌ ಮಾಡಲು ಒಪ್ಪದ ಜನರನ್ನು ಡೆಮಿಸೆಕ್ಷುವಲ್‌ ಎಂದು ಹೇಳಲಾಗುತ್ತದೆ.

2008 ರ ಹೊತ್ತಿಗೆ ಈ ಪದವು ಮುಖ್ಯವಾಹಿನಿಗೆ ಬಂದಿತ್ತು.ಕೆಲವು ಡೇಟಿಂಗ್ ವೆಬ್‌ಸೈಟ್‌ಗಳು ಬಳಕೆದಾರರಿಗೆ ತಮ್ಮ ಲೈಂಗಿಕ ದೃಷ್ಟಿಕೋನದಿಂದ ʼಡೆಮಿಸೆಕ್ಸುವಲ್' ಅನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡುತ್ತವೆ.ಇದರ ಪ್ರಕಾರ ಮಾತನಾಡಿ,ಭಾವನೆಗಳನ್ನು ಬದಲಾಯಿಸುತ್ತಾ ಕೊನೆಗೆ ಲೈಂಗಿಕ ಆಕರ್ಷಣೆ ಒಳಗಾಗುವುದು.ಇದರಲ್ಲೂ ದ್ವಿಲಿಂಗಿ, ಸಲಿಂಗಕಾಮಿ, ಲೆಸ್ಬಿಯನ್, ಕ್ವೀರ್, ಪಾಲಿಯಮರಸ್ ಅಥವಾ ಪ್ಯಾನ್ಸೆಕ್ಸುವಲ್ ಎಂದು ವಿಂಗಡಿಸಬಹುದು ಆದರೆ ಇವರೆಲ್ಲರೂ ಲೈಂಗಿಕ ಆಕರ್ಷಣೆಗೆ ಕೊನೆಯ ಪ್ರಾಶಸ್ತ್ಯ ಕೊಟ್ಟು ಪ್ರೀತಿಗೆ ಮೊದಲ ಸ್ಥಾನ ಕೊಡುವ ಪಂಗಡವಾಗಿದೆ.

Edited By : Suman K
PublicNext

PublicNext

26/11/2024 07:27 pm

Cinque Terre

44.11 K

Cinque Terre

0

ಸಂಬಂಧಿತ ಸುದ್ದಿ