ಚಳಿಗಾಲ ಆರಂಭವಾಗಿದೆ, ರಾತ್ರಿ ಬೆಚ್ಚಗೆ ಮಲಗಿದ್ರೆ ಬೆಳಗ್ಗೆ ಎದ್ದು ಶಾಲೆ,ಆಫೀಸ್ ಹೋಗೋದೇ ದೊಡ್ಡ ಕೆಲಸ ಅಂತ ಅನಿಸಿ ಬಿಡುತ್ತೆ. ಬೆಂಗಳೂರು ಚಳಿ ಆದ್ರೂ ಸಹಿಸಿಕೊಳ್ಳಬಹುದು ಆದ್ರೆ ದೆಹಲಿ ಬಿಸಿಲು, ಚಳಿ ಎರಡೂ ಎಕ್ಸ್ ಟ್ರೀಮ್, ಸಾಲದಕ್ಕೆ ಪೊಲ್ಯೂಷನ್. ಮೈ ಬೆಚ್ಚಗಾಗಿಸಲು ಉಣ್ಣೆ ಬಟ್ಟೆ, ದಪ್ಪನೆಯ ಹೊದಿಕೆ ಪೆಟ್ಟಿಗೆಯಿಂದ ಹೊರ ಬರುತ್ತದೆ.ಆದರೆ ಹಾಸ್ಟೆಲ್ ನಲ್ಲಿರುವ ಹುಡುಗ ಒಬ್ಬ ತಾನು ಇರುವ ಹಾಸ್ಟೇಲ್ ಡಬಲ್ ಡೆಕ್ಕರ್ ಮಂಚದ ಮೇಲೆ ಮಲಗಿಕೊಂಡು ಬೆಚ್ಚಗೆ ಮಾಡಲು ಬಳಸಿದ ತಂತ್ರಗಾರಿಕೆ ನಗು ತರಿಸುವಂತಿದೆ. ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತೋ ಆತನಿಗಷ್ಟೇ ಗೊತ್ತು.ಆದರೂ ಆತನ ಈ ಸರ್ಕಸ್ ಒಮ್ಮೆ ನೋಡಿ ಬಿಡಿ.ಚಳಿಯಿಂದ ರಕ್ಷಿಸಿಕೊಳ್ಳಲು ಬ್ಲ್ಯಾಂಕೆಟ್, ಕಂಬಳಿ, ಗಾದಿಗಳನ್ನು ಒಂದರ ಮೇಲೊಂದು ಎತ್ತರವಾಗಿ ಜೋಡಿಸಿಟ್ಟು ಅದರ ಕೆಳಗೆ ಮಲಗುತ್ತಾನೆ. ಈತನ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು ಈತನ ಸೃಜನಶೀಲತೆಗೆ ಎಲ್ಲರೂ ಬೆರಗಾಗಿದ್ದಾರೆ.
PublicNext
26/11/2024 06:46 pm