ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡಿನಲ್ಲಿ ಡಿಸೆಂಬರ್ 1 ರಿಂದ ಹೆಲ್ಮೆಟ್‌ ಖಡ್ಡಾಯ, ಗೊಂಬೆ,ಹೂವು ಕೊಟ್ಟು ಅಭಿನಂದಿಸಿದ ಟ್ರಾಫಿಕ್‌ ಪೊಲೀಸ್

ಡಿಸೆಂಬರ್ 1 ರಿಂದ ತಮಿಳುನಾಡಿನಲ್ಲಿ ಹೆಲ್ಮೆಟ್‌ ಕಂಪಲ್ಸರಿ,ಹಾಕಿಲ್ಲ ಅಂದ್ರೆ ದಂಡನೂ ಕಂಪಲ್ಸರಿ. ಪರಿಷ್ಕೃತ ದಂಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೊದಲು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್‌ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ವೆಲ್ಲೂರು ಮತ್ತು ತಿರುಪತ್ತೂರಿನಲ್ಲಿ ಸಂಚಾರ ಪೊಲೀಸರು ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ.ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ (NH 44) ರಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಅಧೀಕ್ಷಕರಾದ ಎನ್. ಮತಿವನನ್ ಮತ್ತು ಶ್ರೇಯಾ ಗುಪ್ತಾ ಅವರ ಆದೇಶ್‌ ಮೇರೆಗೆ ಪೊಲೀಸರು ಈ ಅಭಿಯಾನ ಆರಂಭಿಸಿದ್ದಾರೆ.

ವೆಲ್ಲೂರಿನ ಚೆನ್ನೈ-ಬೆಂಗಳೂರು ಹೆದ್ದಾರಿ,ವಾಣಿಯಂಬಾಡಿ ಬಸ್ ಟರ್ಮಿನಸ್ ಜಂಕ್ಷನ್, ಅಂಬೂರಿನ ರಾಜೀವ್ ಗಾಂಧಿ ರಸ್ತೆ ಮತ್ತು ತಿರುಪತ್ತೂರಿನ ಕಲೆಕ್ಟರೇಟ್ ಕಚೇರಿ ಬಳಿ ಹೆಲ್ಮೆಟ್‌ ಧರಿಸಿ ಬಂದಂತಹ ಬೈಕ್‌ ಸವಾರರಿಗೆ ಮಿಕ್ಕಿ ಮೌಸ್‌ ಅನ್ನು ಬಳಸಿ ಚಾಕಲೇಟ್‌,ಗೊಂಬೆಗಳು,ಹೂವು, ಪೆನ್ನು ನೀಡಿ ಅಭಿನಂದಿಸಿದರು.ಈ ಜಿಲ್ಲೆಗಳಲ್ಲಿ 10-15 ಅಪಘಾತಗಳು ಸಂಭವಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಮೊದಲು ಹೆಲ್ಮೆಟ್‌ ಹಾಕದೇ ಇದ್ರೆ 100 ರೂ ದಂಡ ವಿಧಿಸಲಾಗುತ್ತಿತ್ತು ಇನ್ನು ಮುಂದೆ 1,000 ದಂಡ ವಿಧಿಸಲಾಗುತ್ತದೆ.

Edited By : Suman K
PublicNext

PublicNext

26/11/2024 06:38 pm

Cinque Terre

8.04 K

Cinque Terre

0

ಸಂಬಂಧಿತ ಸುದ್ದಿ