ಓರ್ಫಿಶ್ ಅಥವಾ ಡೂಮ್ಸ್ ಡೇ ಮೀನಿನ ಕಳೆಬರಹ ಕ್ಯಾಲಿಫೋರ್ನಿಯಾದಲ್ಲಿ ಸಮುದ್ರದ ದಡದಲ್ಲಿ ಕಂಡುಬಂದಿದೆ.ಸ್ಕ್ರಿಪ್ಪ್ಸ್ ಇನ್ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ಅಲಿಸನ್ ಲಾಫೆರಿಯರ್ ಸಮುದ್ರದ ದಡದಲ್ಲಿ ತನ್ನ ನಾಯಿಯ ಜೊತೆ ವಾಕಿಂಗ್ ಹೋಗುವಾಗ ಈ ಮೀನನ್ನು ಕಂಡಿದ್ದಾರೆ. ದಶಕಗಳಿಂದ ಸಂಶೋಧಕರಿಂದ ಸಂಶೋಧನೆಗೆ ಸಿಗದ ಈ ಮೀನಿನ ಕಳೆಬರಹ ದೊರೆತಿದ್ದು ಜಪಾನಿಗರ ನಂಬಿಕೆ ಪ್ರಕಾರ ಇದು ದುರಂತದ ಮುನ್ಸೂಚನೆಯಂತೆ. 2011 ರಲ್ಲಿ ಜಪಾನಿನಲ್ಲಿ ಈ ಮೀನು ಕಾಣಸಿಕ್ಕಿದ್ದು ಅದು ಭೂಕಂಪದೊಂದಿಗೆ ಕೊನೆಯಾಯಿತು ಎಂಬ ಮೂಢನಂಬಿಕೆ ಇನ್ನೂ ಜಪಾನ್ ನಲ್ಲಿ ಜೀವಂತವವಾಗಿದೆ.ಈ ಮೂಢನಂಬಿಕೆಯಿಂದ ಕ್ಯಾಲಿಫೋರ್ನಿಯನ್ನರಿಗೆ ಭಯ ಎನಿಸಿದ್ರೂ ಸಂಶೋಧಕರು ರೋಮಾಂಚನಗೊಂಡಿದ್ದಾರೆ. ಉದ್ದವಾದ ಈಲ್-ತರಹದ ದೇಹ, ತೆಳ್ಳಗಿನ ಬಾಯಿ,ಕೆಂಪು ಡಾರ್ಸಲ್ ರೆಕ್ಕೆಗಳನ್ನು ಹೊಂದಿರುವ ಈ ಮೀನುಗಳು ಹತ್ತ ರಿಂದ ಹನ್ನೆರಡು ಅಡಿ ಉದ್ದವಿರುತ್ತದೆ.
PublicNext
26/11/2024 06:58 pm