ಪ್ರೀತಿ ಕುರುಡು ಅನ್ನುವುದು ಇಂತಹ ಪ್ರಸಂಗ ನೋಡಿಯೇ ಅನಿಸುತ್ತೆ. 91 ವರ್ಷದ ಮಹಿಳೆಯೋರ್ವಳನ್ನು 23 ವರ್ಷದ ಯುವಕ ಮದುವೆಯಾಗಿ ಇದೀಗ ಜೈಲು ಪಾಲಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಈ ಮದುವೆ ಹಲವಾರು ಷರತ್ತುಗಳ ಮೇಲೆ ನಡೆದಿದೆ. ಇವರಿಬ್ಬರ ಹನಿಮೂನ್ ಸಮಯದಲ್ಲಿ ಏನಾಗಿತ್ತು ಎಂದು ತಿಳಿದರೆ ನೀವು ಶಾಕ್ ಆಗ್ತೀರ.ಇದು ನಡೆದಿರೋದು ಅರ್ಜೆಂಟೀನಾದಲ್ಲಿ. ಹುಡುಗ ಅರ್ಜೆಂಟೀನಾದಲ್ಲಿ ಕಾನೂನು ಓದುತ್ತಿದ್ದ ಹುಡುಗನ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ, ಅವರ ಮನೆಯಲ್ಲಿ ತಾಯಿ ಮತ್ತು ಸಹೋದರನೊಂದಿಗೆ, 91 ವರ್ಷದ ಮಹಿಳೆ ಕೂಡ ವಾಸಿಸುತ್ತಿದ್ದರು. ಈ ಹುಡುಗನ ಶಿಕ್ಷಣದ ಖರ್ಚನ್ನು ಮಹಿಳೆ ಭರಿಸುವುದಾಗಿ ಮಾತು ಕೊಟ್ಟಿದ್ದರಿಂದ ಈ ವಿವಾಹ ನಡೆಯಿತು. ನನಗೆ ಪಿಂಚಣಿ ಬರುತ್ತದೆ ನಾನು ಸತ್ತಾಗ ಆ ಪಿಂಚಣಿ ಹುಡುಗನಿಗೆ ಸೇರುವುದಾಗಿ ಮಾತು ಕೊಟ್ಟಿದ್ದಳು.
ಹನಿಮೂನ್‌ಗೆ ಹೋದಾಗ ಮಹಿಳೆ ಹಾಸಿಗೆಯಲ್ಲೇ ಸಾವನ್ನಪ್ಪಿದಾಗ ಕಥೆ ವಿಚಿತ್ರವಾದ ತಿರುವು ಪಡೆದುಕೊಂಡಿದೆ.ಹುಡುಗ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದಾಗ, ಅಧಿಕಾರಿಗಳು ಅವನ ಮೇಲೆ ಹಲ್ಲೆ ಮಾಡಿ ಪಿಂಚಣಿಗಾಗಿ ಮಹಿಳೆಯನ್ನು ಪೀಡಿಸಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ರು, ಸಹಜ ಸಾವಿನ ಬಗ್ಗೆ ದಾಖಲೆಗಳನ್ನು ನೀಡಿ ಜೈಲಿಗೆ ಹೋಗುವುದರಿಂದ ಹುಡುಗ ಬಚಾವ್ ಆಗಿದ್ದಾನೆ.
PublicNext
26/11/2024 07:10 pm