ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವದ ಸಂಭ್ರಮ ಇನ್ನೂ ಮುಗಿದಿಲ್ಲ. ಇನ್ನು ಹಲವಡೆ ವಿವಿಧ ರೀತಿಯಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ನೆಡೆಯುತ್ತಲೇ ಇದೆ. ಆದ್ರೆ ಕಾಫಿನಾಡಲ್ಲಿ ಮಾತ್ರ ನಾಮಕರಣದ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.
ಚಿಕ್ಕಮಗಳೂರು ನಗರದ ನಿವಾಸಿ ಪ್ರೀತೇಶ್ ದಂಪತಿ, ಕನ್ನಡದ ಮೇಲಿನ ಅಪಾರ ಅಭಿಮಾನದಿಂದ ಪ್ರಿತೇಶ್ ತನ್ನ ಮಗನ ನಾಮಕರಣದಲ್ಲೂ ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಿದ್ದಾರೆ. ಮಗುವಿನ ನಾಮಕರಣ ಸಂದರ್ಭದಲ್ಲಿ ಕರ್ನಾಟಕ ಮ್ಯಾಪ್‌ನ ಮೂಲಕ ತನ್ನ ಮಗುವಿನ ಹೆಸರನ್ನು ಲಾಂಚ್ ಮಾಡಿದ್ದಾರೆ. ಅದರಲ್ಲೂ 69ನೇ ರಾಜ್ಯೋತ್ಸವದ ನೆನಪಿಗಾಗಿ 69 ಪ್ರಥಮಗಳ ಚಾರ್ಟ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅರಿಶಿಣ ಕುಂಕುಮ ನೀಡುವುದು ನಮ್ಮ ಹಿಂದೂ ಸಂಪ್ರದಾಯದ ವಿಶೇಷ. ಆದ್ರೆ ಇಲ್ಲಿ ಬಂದ ಅತಿಥಿಗಳಿಗೆ ಅರಿಶಿಣ ಕುಂಕುಮಕ್ಕೆ ಸಮಾನ ಆಗಿರುವ ಕನ್ನಡದ ಬಾವುಟ ನೀಡಿದ್ದೆ ವಿಶೇಷ ಪ್ರತಿಯೊಬ್ಬರಿಗೂ ಕನ್ನಡದ ಬಗ್ಗೆ ಅರಿವು ಮೂಡಿಸಬೇಕು ಕನ್ನಡದ ಗತ್ತು ಎಲ್ಲರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಈ ರೀತಿಯ ಆಚರಣೆಗೆ ಮುಂದಾಗಿದ್ದಾರೆ.
PublicNext
26/11/2024 04:11 pm