ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಸಮೀಪ ಒಕ್ಕಲಿಗ ಸಮುದಾಯದ ವತಿಯಿಂದ ನೂತನವಾಗಿ ನಿರ್ಮಿಸಿರುವ ಬೆಳ್ಳಿ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಸರ್ಕಾರದ ಗ್ಯಾರಂಟಿಗಳ ಕುರಿತು ಭಾಷಣ ಮಾಡಲು ಮುಂದಾಗಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಒಕ್ಕಲಿಗ ಸಮಾಜದ ಯುವಕರು ಸಚಿವರ ಭಾಷಣಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಇದು ರಾಜಕೀಯ ವೇದಿಕೆಯಲ್ಲ ರಾಜಕೀಯ ಮಾತನಾಡದಾದ್ರೆ ಕೆಳಗಿಳಿಯಿರಿ, ರಾಜಕೀಯ ಮಾಡಬೇಡಿ ನಮಗೂ ರಾಜಕೀಯ ಬರುತ್ತೆ ಅಂತ ಸಚಿವರ ಎದುರು ಕೆಲ ಯುವಕರು ಸಿಟ್ಟಾದ್ರು. ಈ ವೇಳೆ ಮಧ್ಯಪ್ರವೇಶಿಸಿದ ನಿರ್ಮಲಾನಂದ ಶ್ರೀಗಳು ವಾತಾವರಣ ತಿಳಿಗೊಳಿಸಿದರು. ಕೊನೆಗೆ ಭಾಷಣ ಮಧ್ಯದಲ್ಲಿ ಸಚಿವ ಜಾರ್ಜ್ ಕ್ಷಮೆಯಾಚಿಸಿದರು.
PublicNext
25/11/2024 07:28 pm