ಚಿಕ್ಕಮಗಳೂರು: ಕಾಂಗ್ರೆಸ್ಸಿಗಿಂತ ಬಿಜೆಪಿ ಅವಧಿಯಲ್ಲೇ ಹೆಚ್ಚು ವಕ್ಫ್ ನೋಟೀಸ್ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡಿಗೆ ಬರೆಯೋದು ಬೇರೆ, ದಾನದ ಆಸ್ತಿಯನ್ನ ಪ್ರಭಾವಿಗಳು ದುರ್ಬಳಕೆ ಮಾಡಿಕೊಂಡಿರೋದು ಅನ್ವರ್ ಮಾನಪ್ಪಾಡಿ ವರದಿಯಲ್ಲಿ ಉಲ್ಲೇಖವಾಗಿದೆ. ನಾವು ಆ ಆಸ್ತಿಯನ್ನು ಉಳಿಸಿ ಎಂದು ಹೇಳಿದ್ದು ಹೌದು ಎಂದಿದ್ದಾರೆ.ಈಗ ಎಲ್ಲಾ ನಂದು ನಂದು ಅಂತ ಕಂಡವರ ಆಸ್ತಿಗೆ ಕಣ್ಣಾಕುವ ಕೆಲಸ ನಡೆಯುತ್ತಿದೆ.
ದೇವಸ್ಥಾನ, ವಿಧಾನಸೌಧ, ಸಂಸತ್ತು ಎಲ್ಲಾ ನಮ್ದು ಅನ್ನೋದು ಬಕಾಸುರ ಸಂಸ್ಕೃತಿ ಅಂತ ಹೇಳಿದ್ದು ನಾನು ಜನ ಬರೀ ಬಡಿಗೆ ತೆಗೆದುಕೊಳ್ಳಲ್ಲ, ಬಡಿಗೆ ಜೊತೆ ಕಾಲಿನಲ್ಲಿ ಇರೋದನ್ನೂ ತೆಗೆದುಕೊಳ್ತಾರೆ ಎಂದು ಕಿಡಿಕಾರಿರುವ ಅವರು, ರೈತರ ಆಸ್ತಿ, ದೇವಸ್ಥಾನ, ಸ್ಮಶಾನ, ಶಾಲೆ, ಆಸ್ಪತ್ರೆ, ಕೆರೆಯನ್ನ ಅತಿಕ್ರಮಿಸಿಕೊಳ್ಳೋಕೆ ಯಾವತ್ತೂ ಆದೇಶಿಸಿಲ್ಲ, 1500 ವರ್ಷದ ದೇವಸ್ಥಾನವನ್ನ ಅತಿಕ್ರಮಿಸಿ ಎಂದು ಬಿಜೆಪಿ ಹೇಳಿತ್ತಾ ಎಂದು ಪ್ರಶ್ನಿಸಿದ್ದಾರೆ. ರೈತರ 18 ಸಾವಿರ ಎಕರೆಯನ್ನ ದಾಖಲೆ ಇಲ್ಲದೆ ವಕ್ಫ್ ಬೋರ್ಡಿಗೆ ಮಾಡಕ್ಕೆ ನಾವು ಹೇಳಿದ್ದಾ ಎಂದು ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.
PublicNext
25/11/2024 04:26 pm