ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : 'ಅಮ್ಮಾ ಎನ್ನುವ ಕನ್ನಡದ ಅಕ್ಷರ ಬದಲಾಗಿ ಮಮ್ಮಿಯಾಗಿದೆ' - ನಿವೃತ್ತ ಕೆಎಎಸ್ ಅಧಿಕಾರಿ

ಚಳ್ಳಕೆರೆ : 2000 ವರ್ಷ ಇತಿಹಾಸವಿರುವ ಕನ್ನಡ ಭಾಷೆ ಹಾಗೂ ಈ ಭಾಷೆಯ ಪರಂಪರೆ ಅಂಶಗಳ ಜೊತೆ ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು .

ತಾಲ್ಲೂಕಿನ ನಾಯಕನಟ್ಟಿ ಪಟ್ಟಣದಲ್ಲಿ ಕರ್ನಾಟಕ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಆಂಗ್ಲ ಭಾಷೆಯ ಮಮ್ಮಿ ಎನ್ನುವ ಎರಡು ಅಕ್ಷರ ತುಟಿಯಂಚಿನಲ್ಲಿ ಮರೆಯಾಗುತ್ತದೆ.

ಆದರೆ ಅಮ್ಮ ಎನ್ನುವ ಕನ್ನಡ ಭಾಷೆಯ ಭಾವನಾತ್ಮಕ ಪದ ಸ್ವರ ಮತ್ತು ವ್ಯಂಜನ ಮಿಶ್ರಿತವಾಗಿ ನಾಭಿಯಲ್ಲಿ ಹುಟ್ಟಿ ತುಟಿಯಲ್ಲಿ ಅಂತ್ಯವಾಗುತ್ತದೆ ಇಂತಹ ಉತ್ಕೃಷ್ಟವಾದ ಭಾಷೆ ಪ್ರಪಂಚದಲ್ಲಿ ಎಲ್ಲೂ ಇಲ್ಲ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಆಯ ಕೆಲವು ಭಾಷೆಗಳು ಅಳಿದು ಹೋಗಿವೆ ಇನ್ನು ಶತಾ ಶತಮಾನಗಳಿಸಿದರು ಕೂಡ ನಮ್ಮ ಕನ್ನಡ ಭಾಷೆ ಅನನ್ಯವಾಗಿ ಬೆಳೆಯುತ್ತಲೇ ಇರುತ್ತದೆ ಎಂದರು.

Edited By : PublicNext Desk
Kshetra Samachara

Kshetra Samachara

25/11/2024 04:09 pm

Cinque Terre

940

Cinque Terre

0

ಸಂಬಂಧಿತ ಸುದ್ದಿ