ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳಲ್ಕೆರೆ : ಜೀವ ಕೈಯಲ್ಲಿ ಹಿಡಿದು ಕೆರೆ ಏರಿ ಮೇಲೆ ಸಂಚರಿಸುವ ಪರಿಸ್ಥಿತಿ - ಯಾಮಾರಿದರೆ ಕೆರೆ ನೀರಿಗೆ ಗಾಡಿ ಪಲ್ಟಿ

ಹೊಳಲ್ಕರೆ : ಒಂದು ಕಡೆ ಪ್ರಪಾತ ಮತ್ತೊಂದು ಕಡೆ ಆಳ ನೀರು. ಇವೆರಡರ ಮಧ್ಯದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಇಲ್ಲವೇ ನೀರಿನಲ್ಲಿ ಬೀಳುವ ಆತಂಕ... ಇದು ತಾಲ್ಲೂಕಿನಲ್ಲಿರುವ ಕೆರೆಗಳ ಏರಿಯ ಮೇಲಿರುವ ಮುಖ್ಯರಸ್ತೆಗಳಲ್ಲಿನ ಸಂಚಾರಿಸುವ ವಾಹನ ಸವಾರರ ಸ್ಥಿತಿ.

ಇಲ್ಲಿನ ದಾವಣಗೆರೆ ರಸ್ತೆಯಲ್ಲಿರುವ ಹಿರೇಕೆರೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ. ಈ ಕೆರೆಯ ಏರಿ ಸುಮಾರು 2 ಕಿ.ಮೀ. ಉದ್ದವಿದೆ. ಕೆರೆಯ ಎಡಭಾಗದ ಏರಿಯ ಪಕ್ಕದಲ್ಲಿ ಪ್ರಪಾತವಿದ್ದು, ಅಲ್ಲಲ್ಲಿ ಹಳೆಯ ಕಾಲದ ಬಾವಿಗಳೂ ಇವೆ. ಬಲಕ್ಕೆ ಕೆರೆಯ ತುಂಬಾ ಅಪಾರ ಜಲರಾಶಿ ರಸ್ತೆಗೆ ತಗುಲುವಂತೆ ಇದೆ. ಈ ಕೆರೆಯ ಎರಡೂ ಕಡೆಗಳಲ್ಲಿ ತಡೆಗೋಡೆಯಾಗಲೀ, ಕಬ್ಬಿಣದ ಸುರಕ್ಷತಾ ಪಟ್ಟಿಯಾಗಲೀ ಇಲ್ಲ. ಕೆರೆ ಏರಿ ಅಂಕು ಡೊಂಕಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ಚಾಲಕರು ತಮ್ಮ ವಾಹನವನ್ನು ಕೆರೆಗೆ ಬೀಳಿಸುವ ಆತಂಕ ಇದೆ. ರಾತ್ರಿ ವೇಳೆ ಕೆರೆ ಕಾಣಿಸುವುದೇ ಇಲ್ಲ. ಕೆರೆಯ ಸ್ಥಿತಿಗತಿ ಗೊತ್ತಿರದ ಅಪರಿಚತ ಚಾಲಕರಾದರೆ ಕೆರೆಗೆ ಬೀಳುವ ಸಾಧ್ಯತೆ ಹೆಚ್ಚು.

Edited By : PublicNext Desk
Kshetra Samachara

Kshetra Samachara

24/11/2024 06:46 am

Cinque Terre

740

Cinque Terre

0

ಸಂಬಂಧಿತ ಸುದ್ದಿ