ಚಳ್ಳಕೆರೆ: ತಾಲ್ಲೂಕಿನಲ್ಲಿ ಬಸ್ ತಂಗುದಾಣಗಳು ಸಂಪೂರ್ಣ ಶಿಥಿಲಗೊಂಡಿವೆ. ಬಸ್ಗಾಗಿ ಕಾಯುವ ಪ್ರಯಾಣಿಕರು ಬಿಸಿಲು ಮಳೆಯಲ್ಲಿ ಬಸ್ಗಳಿಗಾಗಿ ಕಾಯುವಂತಾಗಿದೆ.
ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಮುಖ್ಯರಸ್ತೆಯಲ್ಲಿ ಇರುವ ಬಸ್ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು ಯಾವಾಗ ಬೇಕಾದರೂ ಬಿದ್ದು ಹೋಗಿ ಅಪಾಯ ತರಬಹುದು. ಬಸ್ ತಂಗುದಾಣದಲ್ಲಿ ಸಿಮೆಂಟ್ ಕಿತ್ತು ಹೋಗಿದ್ದು, ಇಟ್ಟಿಗೆಗಳು ಚರ್ಮ ಇಲ್ಲದ ಮೂಳೆಗಳಂತೆ ಕಾಣುತ್ತಿವೆ.
ಬಸ್ ತಂಗುದಾಣದ ಮೇಲೆ ಗಿಡವೊಂದು ಮರವಾಗಿ ಬೆಳೆಯುತ್ತಿದೆ.
ಒಟ್ಟಾರೆ ತಾಲೂಕಿನಲ್ಲಿ ಬಸ್ ತಂಗುದಾಣಗಳಿಗೆ ಕಾಯಕಲ್ಪ ಸಿಗುತ್ತಾ ಕಾದು ನೋಡಬೇಕಿದೆ.
PublicNext
24/11/2024 08:02 pm