ಮೊಳಕಾಲ್ಮುರು:ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯು ಅನುಪಾಲನಾ ವರದಿ ಪರಿಶೀಲನೆಗಷ್ಟೆ ಸೀಮಿತವಾಗಿ ಕೇವಲ ಒಂದು ಗಂಟೆಯಲ್ಲಿ ಮುಕ್ತಾಯವಾಯಿತು.
ಆರಂಭದಲ್ಲಿ ವಾಟರ್ ಸಪ್ಲೆ ಎಇಇ ಹರೀಶ್ ವರದಿ ಮಂಡಿಸಿ 113 ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 77 ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ 36 ಕಾಮಗಾರಿಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದ್ದಕ್ಕೆ ತಾಪಂ ನೋಡಲ್ ಅಧಿಕಾರಿ ಲಕ್ಷ್ಮಣ್ ತಳವಾರ್ ಮಧ್ಯ ಪ್ರವೇಶಿಸಿ ಮಾತನಾಡಿ, ಕಳೆದ ನಾಲ್ಕು ಸಭೆಗಳಿಂದಲೂ ತಾವು ಇದೇ ಮಾಹಿತಿಯನ್ನು ನೀಡುತ್ತಿದ್ದೀರಾ ಕಳೆದ ಸಭೆಗಳಲ್ಲಿ ಘಟಕ ನಿರ್ಮಾಣ ಹಾಗೂ ನಿರ್ವಹಣೆಯ ಗುತ್ತಿಗೆ ಪಡೆದು ವರ್ಷ ಕಳೆದರೂ ಕೆಲಸ ಆರಂಭಿಸದ ಸಂಸ್ಥೆಗಳನ್ನು ಬ್ಲಾಕ್ ಲೀಸ್ಟ್ ಹಾಕುವಂತೆ ಸೂಚಿಸಲಾಗಿತ್ತು ನೀವು ಯಾವ ಸಂಸ್ಥೆಯನ್ನು ಬ್ಲಾಕ್ ಲೀಸ್‌ಗೆ ಹಾಕಿದ್ದೀರಾ ಎನ್ನುವ ಪಟ್ಟಿ ನೀಡಿ ಎಂದು ತಿಳಿಸಿದರು.
ಇದಕ್ಕುತ್ತರಿಸಿದ ವಾಟರ್ ಸಪ್ಪೆ ಎಇಇ ಹರೀಶ್, ನಾವು ಅವರಿಗೆ ನೋಟೀಸ್ ನೀಡಲಾಗಿತ್ತು ಆದರೆ ಅವರು ಈಗಾಗಲೇ ಕಾಮಗಾರಿಯನ್ನು ಆರಂಭಿಸಿ ಮುಗಿಯುವ ಹಂತಕ್ಕೆ ತಂದಿದ್ದಾರೆ ಎಂದು ತಿಳಿಸಿದರು ಕೆಲಸ ಆಗಿದ್ದಲ್ಲಿ ಸಂತಸ ಪಡೋಣ. ಗುತ್ತಿಗೆದಾರರು ನಿಗಧಿತ ಸಮಯದ ಒಳಗಾಗಿ ಕಾಮಗಾರಿ ಪೂರ್ಣಗೊಳಸದೆ ಅವರಿಗೆ ಇಷ್ಟ ಬಂದಾಗ ಕಾಮಗಾರಿ ಕೈಗೊಳ್ಳುವುದು ನಿಯಮವಲ್ಲ,ಇವರನ್ನು ಬ್ಲಾಕ್ ಲಿಸ್ಟ್ ಗೆ ಹಾಕಿ.ಈ ಸಂಬಂಧ ಜಿಪಂ ಸಿಇಒ ಗಮನಕ್ಕೆ ತಂದು ಅವರ ನಿರ್ದೇಶನ ಪಡೆದು ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಖಡಕ್ಕಾಗಿ ಸೂಚಿಸಿದರು.
Kshetra Samachara
22/11/2024 05:32 pm